ಕಾರ್ಡ್ ಸದಸ್ಯರು ಟಿವಿಎಸ್ ಕ್ರೆಡಿಟ್ ಆರ್ಬಿಎಲ್ ಬ್ಯಾಂಕ್ ಗೋಲ್ಡ್ ಕ್ರೆಡಿಟ್ ಕಾರ್ಡಿನೊಂದಿಗೆ ಈ ಕೆಳಗಿನ ಪ್ರಯೋಜನಗಳನ್ನು ಆನಂದಿಸುತ್ತಾರೆ:
- ವೆಲ್ಕಮ್ ಪ್ರಯೋಜನಗಳು – 30 ದಿನಗಳ ಒಳಗೆ ನಿಮ್ಮ ಮೊದಲ ಟ್ರಾನ್ಸಾಕ್ಷನ್ ಮೇಲೆ 6,000 ರಿವಾರ್ಡ್ ಪಾಯಿಂಟ್ಗಳು.
- ಬೇಸ್ ರಿವಾರ್ಡ್ಗಳು ಆಯ್ದ ಕೆಟಗರಿಗಳ ಅಡಿಯಲ್ಲಿ ಎಲ್ಲಾ ಖರೀದಿಗಳಿಗೆ ಪ್ರತಿ ₹100 ಕ್ಕೆ 2 ರಿವಾರ್ಡ್ ಪಾಯಿಂಟ್ಗಳು.
- ವೇಗವರ್ಧಿತ ರಿವಾರ್ಡ್ಗಳು- ಈಸಿಡೈನರ್ನಲ್ಲಿ 5% ಕ್ಯಾಶ್ಬ್ಯಾಕ್, ಪ್ರತಿ ತಿಂಗಳು ₹250 ರವರೆಗೆ
-
ಲಾಂಜ್ ಅಕ್ಸೆಸ್
ಡೊಮೆಸ್ಟಿಕ್ ಏರ್ಪೋರ್ಟ್ ಲಾಂಜ್ ಅಕ್ಸೆಸ್ - ಆಯ್ದ ಕೆಟಗರಿಗಳ ಅಡಿಯಲ್ಲಿ ಪ್ರತಿ ಕ್ಯಾಲೆಂಡರ್ ತ್ರೈಮಾಸಿಕಕ್ಕೆ ಕನಿಷ್ಠ ₹ 50,000 ಖರ್ಚುಗಳ ಮೇಲೆ 1 ಕಾಂಪ್ಲಿಮೆಂಟರಿ ಡೊಮೆಸ್ಟಿಕ್ ಲಾಂಜ್ ಅಕ್ಸೆಸ್. ಆಯ್ದ ಕೆಟಗರಿಗಳ ಅಡಿಯಲ್ಲಿ ಪ್ರತಿ ಕ್ಯಾಲೆಂಡರ್ ತ್ರೈಮಾಸಿಕಕ್ಕೆ ಕನಿಷ್ಠ ₹ 75,000 ಖರ್ಚುಗಳ ಮೇಲೆ 2 ಕಾಂಪ್ಲಿಮೆಂಟರಿ ಡೊಮೆಸ್ಟಿಕ್ ಲಾಂಜ್ ಅಕ್ಸೆಸ್ ಪಡೆಯಿರಿ.
ಅಂತಾರಾಷ್ಟ್ರೀಯ ಏರ್ಪೋರ್ಟ್ ಲೌಂಜ್ ಅಕ್ಸೆಸ್ - ಆಯ್ದ ಕೆಟಗರಿಗಳ ಅಡಿಯಲ್ಲಿ ಪ್ರತಿ ಕ್ಯಾಲೆಂಡರ್ ತ್ರೈಮಾಸಿಕಕ್ಕೆ ಕನಿಷ್ಠ ₹1 ಲಕ್ಷದ ಖರ್ಚುಗಳಿಗೆ 1 ಕಾಂಪ್ಲಿಮೆಂಟರಿ ಅಂತಾರಾಷ್ಟ್ರೀಯ ಲೌಂಜ್ ಅಕ್ಸೆಸ್.
- ಅಂತಾರಾಷ್ಟ್ರೀಯ ಪ್ರಯೋಜನ ಅಂತಾರಾಷ್ಟ್ರೀಯ ಖರೀದಿಗಳಿಗಾಗಿ ಖರ್ಚು ಮಾಡಿದ ಪ್ರತಿ ₹ 100 ಕ್ಕೆ 10 ರಿವಾರ್ಡ್ ಪಾಯಿಂಟ್ಗಳು.
- ತ್ರೈಮಾಸಿಕ ಮೈಲಿಗಲ್ಲು - ಆಯ್ದ ಕೆಟಗರಿಗಳ ಅಡಿಯಲ್ಲಿ ಕ್ಯಾಲೆಂಡರ್ ತ್ರೈಮಾಸಿಕದಲ್ಲಿ ಕನಿಷ್ಠ ₹50,000 ಖರ್ಚು ಮಾಡಿ ₹500 ಮೌಲ್ಯದ ಡೈನಿಂಗ್/ಶಾಪಿಂಗ್ ವೌಚರ್ಗಳನ್ನು ಆನಂದಿಸಿ.
- ವಾರ್ಷಿಕ ಮೈಲಿಗಲ್ಲು - ಆಯ್ದ ಕೆಟಗರಿಗಳ ಅಡಿಯಲ್ಲಿ ₹2.5 ಲಕ್ಷಗಳ ವಾರ್ಷಿಕ ಖರ್ಚುಗಳಿಗೆ 6000 ರಿವಾರ್ಡ್ ಪಾಯಿಂಟ್ಗಳು.
- ಇಂಧನ ಮೇಲ್ತೆರಿಗೆ ಮನ್ನಾ: ₹ 400 ಮತ್ತು ₹ 5,000 ನಡುವೆ ಮಾಡಿದ ಇಂಧನ ಟ್ರಾನ್ಸಾಕ್ಷನ್ಗಳಿಗೆ ತಿಂಗಳಿಗೆ ₹ 200 ವರೆಗೆ ಇಂಧನ ಮೇಲ್ತೆರಿಗೆ ಮನ್ನಾ.
ಗಮನಿಸಿ: 1 ರಿವಾರ್ಡ್ ಪಾಯಿಂಟ್ ಮೌಲ್ಯ ₹ 0.25 ವರೆಗೆ ಇರುತ್ತದೆ
ವಿವರವಾದ ನಿಯಮ ಮತ್ತು ಷರತ್ತುಗಳನ್ನು ಇಲ್ಲಿ ನೋಡಿ – ಪ್ರಾಡಕ್ಟ್ ನಿಯಮ ಮತ್ತು ಷರತ್ತುಗಳು
ನಮೂದಿಸಿದ ಮರ್ಚೆಂಟ್ ಕೆಟಗರಿಗಳ ಅಡಿಯಲ್ಲಿ ಮಾಡಲಾದ ಖರೀದಿಗಳನ್ನು ರಿವಾರ್ಡ್ ಪಾಯಿಂಟ್ಗಳ ಪ್ರಯೋಜನಗಳಿಂದ, ಮಾಸಿಕ ಮತ್ತು ವಾರ್ಷಿಕ ಮೈಲಿಗಲ್ಲು ಪ್ರಯೋಜನಗಳಿಂದ ಹೊರಗಿಡಲಾಗುತ್ತದೆ: ಫ್ಯೂಯಲ್ ಮತ್ತು ಆಟೋ, ಯುಟಿಲಿಟಿಗಳು, ಇನ್ಶೂರೆನ್ಸ್, ಕ್ವಾಶಿ-ಕ್ಯಾಶ್, ರೈಲ್ವೆ, ರಿಯಲ್ ಎಸ್ಟೇಟ್/ಬಾಡಿಗೆ, ಶಿಕ್ಷಣ, ವಾಲೆಟ್ಗಳು/ಸೇವಾ ಪೂರೈಕೆದಾರರು, ಸರ್ಕಾರಿ ಸೇವೆಗಳು, ಒಪ್ಪಂದದ ಸೇವೆಗಳು, ನಗದು, ಇತರ, ಬಿಲ್ಸ್2ಪೇ ಮತ್ತು ಇಎಂಐ
*ಮೇಲೆ ತಿಳಿಸಿದ ಹೊರಗಿಡುವಿಕೆಯು ಅಂತಾರಾಷ್ಟ್ರೀಯ ಖರೀದಿಗಳು ಮತ್ತು ರೈಲ್ವೆ ಲೌಂಜ್ ಪ್ರಯೋಜನಕ್ಕೆ ಅನ್ವಯವಾಗುವುದಿಲ್ಲ





