>

ಭದ್ರತಾ ಎಚ್ಚರಿಕೆ: ವಂಚಕರು ಟಿವಿಎಸ್ ಕ್ರೆಡಿಟ್‌ನ ಹೆಸರನ್ನು ದುರ್ಬಳಕೆ ಮಾಡುತ್ತಿದ್ದಾರೆ. ಯಾವುದೇ ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳಬೇಡಿ ಅಥವಾ ಯಾರಿಗೂ ಹಣ ಟ್ರಾನ್ಸ್‌ಫರ್ ಮಾಡಬೇಡಿ. ವಿಶೇಷ ಆಫರ್‌ಗಳ ಪುಟಕ್ಕೆ ಭೇಟಿ ನೀಡುವ ಮೂಲಕ ನಮ್ಮ ಎಲ್ಲಾ ವಿಶೇಷ ಆಫರ್‌ಗಳನ್ನು ಪರಿಶೀಲಿಸಿ. ನೀವು ಯಾವುದೇ ನಕಲಿ ಕರೆಗಳನ್ನು ಪಡೆದರೆ, 1930 ಗೆ ಕರೆ ಮಾಡುವ ಮೂಲಕ ಅಥವಾ ಸಂಚಾರ ಸಾಥಿ ಪೋರ್ಟಲ್ ಅಥವಾ ಆ್ಯಪ್‌ ಮೂಲಕ ತಕ್ಷಣವೇ ಅವುಗಳನ್ನು ವರದಿ ಮಾಡಿ

Hamburger Menu Icon
products image

ಪತ್ರಿಕಾ ಪ್ರಕಟಣೆಗಳು

ವಿಶೇಷ ಒಳನೋಟಗಳು ಮತ್ತು ಮುಖ್ಯಾಂಶಗಳನ್ನು ಅನ್ವೇಷಿಸಿ

ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಡಿಸೆಂಬರ್ 24 ರಂದು ಕೊನೆಗೊಂಡ ಒಂಬತ್ತು ತಿಂಗಳಿಗೆ ಟಿವಿಎಸ್ ಕ್ರೆಡಿಟ್ 28% ರಷ್ಟು ಅಂದರೆ ₹541 ಕೋಟಿಯ ದೃಢವಾದ ತೆರಿಗೆ ನಂತರ ನಿವ್ವಳ ಲಾಭದ ಬೆಳವಣಿಗೆಯನ್ನು ವರದಿ ಮಾಡಿದೆ

ಪ್ರಕಟಣೆ: ಟಿವಿಎಸ್ ಕ್ರೆಡಿಟ್ ದಿನಾಂಕ: 28 | ಜನವರಿ | 2025

ಬೆಂಗಳೂರು, 27 ಜನವರಿ 2025: ಭಾರತದ ಪ್ರಮುಖ ಎನ್‌ಬಿಎಫ್‌ಸಿಗಳಲ್ಲಿ ಒಂದಾದ ಟಿವಿಎಸ್ ಕ್ರೆಡಿಟ್ ಸರ್ವೀಸಸ್ ಲಿಮಿಟೆಡ್, ಡಿಸೆಂಬರ್ 31, 2024 ರಂದು ಕೊನೆಗೊಂಡ ತ್ರೈಮಾಸಿಕ ಮತ್ತು ಒಂಬತ್ತು ತಿಂಗಳಿಗೆ ತನ್ನ ಆಡಿಟ್ ಮಾಡದ ಹಣಕಾಸಿನ ಫಲಿತಾಂಶಗಳನ್ನು ಪ್ರಕಟಿಸಿದೆ, ಇದು ಕಂಪನಿಯ ದೃಢವಾದ ಬೆಳವಣಿಗೆ ಮತ್ತು ಹಣಕಾಸಿನ ಸ್ಥಿರತೆಯನ್ನು ಪ್ರತಿಬಿಂಬಿಸುತ್ತದೆ. ಡಿಸೆಂಬರ್ 31, 2024 ರಂದು ಕೊನೆಗೊಂಡ ಒಂಬತ್ತು ತಿಂಗಳಿಗೆ ₹541 ಕೋಟಿಯ ತೆರಿಗೆಯ ನಂತರದ ನಿವ್ವಳ ಲಾಭವನ್ನು ಎನ್‌ಬಿಎಫ್‌ಸಿ ವರದಿ ಮಾಡಿದೆ.

ಡಿಸೆಂಬರ್ 24 ರಂತೆ ಕಂಪನಿಯು ₹27,190 ಕೋಟಿ ಮೌಲ್ಯದ ನಿರ್ವಹಣೆಯಲ್ಲಿರುವ ಆಸ್ತಿಯನ್ನು (ಎಯುಎಂ) ವರದಿ ಮಾಡಿದೆ, ಡಿಸೆಂಬರ್ 23 ಕ್ಕೆ ಹೋಲಿಸಿದರೆ ಇದು 7% ವಾರ್ಷಿಕ ಬೆಳವಣಿಗೆಯನ್ನು ದಾಖಲಿಸಿದೆ.

ಕ್ವಾರ್ಟರ್3 ಹಣಕಾಸು ವರ್ಷ25 ಮುಖ್ಯಾಂಶಗಳು:

  • ಹಣಕಾಸು ವರ್ಷ 25 ರ 3ನೇ ತ್ರೈಮಾಸಿಕಕ್ಕೆ ಎಯುಎಂ 27,190 ಕೋಟಿ ತಲುಪಿದೆ, ಹಣಕಾಸು ವರ್ಷ 24 ರ 3ನೇ ತ್ರೈಮಾಸಿಕಕ್ಕೆ ಹೋಲಿಸಿದರೆ 7% ಬೆಳವಣಿಗೆಯಾಗಿದೆ.
  • ಹಣಕಾಸು ವರ್ಷ 25 ದ 3ನೇ ತ್ರೈಮಾಸಿಕದ ಒಟ್ಟು ಆದಾಯವು 1,710 ಕೋಟಿಯಾಗಿದ್ದು, ಹಣಕಾಸು ವರ್ಷ 24 ದ 3ನೇ ತ್ರೈಮಾಸಿಕಕ್ಕೆ ಹೋಲಿಸಿದರೆ 12% ಬೆಳವಣಿಗೆ ಕಂಡಿದೆ.
  • ಹಣಕಾಸು ವರ್ಷ 25 ರ 3ನೇ ತ್ರೈಮಾಸಿಕದ ತೆರಿಗೆಗೆ ಮೊದಲಿನ ಲಾಭವು 321 ಕೋಟಿಯಾಗಿದೆ, ಇದು ಹಣಕಾಸು ವರ್ಷ 24 ರ 3ನೇ ತ್ರೈಮಾಸಿಕದ ತೆರಿಗೆಗೆ ಹೋಲಿಸಿದರೆ 40% ಬೆಳವಣಿಗೆಯಾಗಿದೆ.
  • ಹಣಕಾಸು ವರ್ಷ 25 ರ 3ನೇ ತ್ರೈಮಾಸಿಕದ ತೆರಿಗೆಯ ನಂತರ ನಿವ್ವಳ ಲಾಭವು 240 ಕೋಟಿಯಾಗಿದೆ, ಹಣಕಾಸು ವರ್ಷ 24 ರ 3ನೇ ತ್ರೈಮಾಸಿಕಕ್ಕೆ ಹೋಲಿಸಿದರೆ 40% ಬೆಳವಣಿಗೆಯಾಗಿದೆ.

 

ಹಣಕಾಸು ವರ್ಷ25 ರ 9 ತಿಂಗಳ ಮುಖ್ಯಾಂಶಗಳು:

  • ಡಿಸೆಂಬರ್ 24 ರಂತೆ ಎಯುಎಂ 27,190 ಕೋಟಿಯಾಗಿದೆ, ಡಿಸೆಂಬರ್ 23 ಕ್ಕೆ ಹೋಲಿಸಿದರೆ 7% ಬೆಳವಣಿಗೆ ಇದಾಗಿದೆ.
  • ಹಣಕಾಸು ವರ್ಷ 25 ರ 9 ತಿಂಗಳ ಒಟ್ಟು ಆದಾಯ ₹4,956 ಕೋಟಿ, ಹಣಕಾಸು ವರ್ಷ 24 ರ 9 ತಿಂಗಳ ಅವಧಿಗೆ ಹೋಲಿಸಿದರೆ 16% ಬೆಳವಣಿಗೆಯಾಗಿದೆ.
  • ಹಣಕಾಸು ವರ್ಷ 25 ರ 9 ತಿಂಗಳ ಅವಧಿಯ ತೆರಿಗೆಗೆ ಮೊದಲಿನ ಲಾಭವು 724 ಕೋಟಿಯಾಗಿದೆ, ಇದು ಹಣಕಾಸು ವರ್ಷ 24 ರ 9 ತಿಂಗಳ ಅವಧಿಗೆ ಹೋಲಿಸಿದರೆ 28% ಬೆಳವಣಿಗೆಯಾಗಿದೆ.
  • ಹಣಕಾಸು ವರ್ಷ 25 ರ 9 ತಿಂಗಳ ಅವಧಿಗೆ ತೆರಿಗೆ ನಂತರದ ನಿವ್ವಳ ಲಾಭವು 541 ಕೋಟಿಯಾಗಿದೆ, ಹಣಕಾಸು ವರ್ಷ 24 ರ ಅದೇ 9 ತಿಂಗಳ ಅವಧಿಗೆ ಹೋಲಿಸಿದರೆ 28% ಬೆಳವಣಿಗೆಯಾಗಿದೆ.

 

ಹಣಕಾಸು ವರ್ಷ 25 ರ 3 ನೇ ತ್ರೈಮಾಸಿಕದಲ್ಲಿ, ಹಬ್ಬದ ಉತ್ಸಾಹ, ಹೆಚ್ಚಿದ ಬಳಕೆ ಮತ್ತು ಆಕರ್ಷಕ ಗ್ರಾಹಕ ಆಫರ್‌ಗಳ ಕಾರಣದಿಂದ ಸಾಲದ ಬೇಡಿಕೆಯು ಹೆಚ್ಚಾಗಿದೆ. ಟಿವಿಎಸ್ ಕ್ರೆಡಿಟ್ ಈ ಅವಧಿಯಲ್ಲಿ ವಿಶೇಷವಾಗಿ ಕನ್ಸ್ಯೂಮರ್ ಲೋನ್‌ಗಳು ಮತ್ತು ವಾಹನ ಫೈನಾನ್ಸ್‌ನಲ್ಲಿ ಮಾರುಕಟ್ಟೆ ಪಾಲಿನಲ್ಲಿ ಸುಧಾರಣೆಯೊಂದಿಗೆ ಆರೋಗ್ಯಕರ ಬೆಳವಣಿಗೆಯನ್ನು ನೋಡಿದೆ. ಹಣಕಾಸು ವರ್ಷ 25 ರ 3 ನೇ ತ್ರೈಮಾಸಿಕದಲ್ಲಿ, ಟಿವಿಎಸ್ ಕ್ರೆಡಿಟ್ ತನ್ನ ಗ್ರಾಹಕರಲ್ಲಿ ಇದುವರೆಗಿನ ಅತ್ಯಧಿಕ ತ್ರೈಮಾಸಿಕ ಬೆಳವಣಿಗೆಯನ್ನು ಕಂಡಿದೆ, ದಾಖಲೆಯ16 ಲಕ್ಷ ಹೊಸ ಗ್ರಾಹಕರಿಗೆ ಸಾಲದ ಪ್ರಾಡಕ್ಟ್‌ಗಳನ್ನು ವಿತರಿಸುವ ಜೊತೆಗೆ, ಅದರ ಒಟ್ಟು ಗ್ರಾಹಕರ ಸಂಖ್ಯೆ ಸುಮಾರು 1.8 ಕೋಟಿಗೆ ತಲುಪಿದೆ.

ಉತ್ಪನ್ನದ ಕೊಡುಗೆಗಳು, ವಿತರಣೆ, ಡಿಜಿಟಲ್ ಪರಿವರ್ತನೆ, ಗ್ರಾಹಕರ ಅನುಭವ ಮತ್ತು ಕಾರ್ಯಾಚರಣೆಯ ದಕ್ಷತೆಯನ್ನು ವಿಸ್ತರಿಸಲು ಟಿವಿಎಸ್ ಕ್ರೆಡಿಟ್ ತನ್ನ ಬದ್ಧತೆಯಲ್ಲಿ ದೃಢವಾಗಿ ನಿಂತಿದೆ.

ಟಿವಿಎಸ್ ಕ್ರೆಡಿಟ್ ಸರ್ವೀಸಸ್ ಲಿಮಿಟೆಡ್ ಬಗ್ಗೆ:

ಟಿವಿಎಸ್ ಕ್ರೆಡಿಟ್ ಸರ್ವೀಸಸ್ ಲಿಮಿಟೆಡ್ ಅರ್‌ಬಿಐ ನೊಂದಿಗೆ ನೋಂದಣಿಯಾದ ಭಾರತದ ಪ್ರಮುಖ ಮತ್ತು ವೈವಿಧ್ಯಮಯ ಬ್ಯಾಂಕಿಂಗೇತರ ಹಣಕಾಸು ಕಂಪನಿಗಳಲ್ಲಿ ಒಂದಾಗಿದೆ. ಭಾರತದಾದ್ಯಂತ 49,300 ಕ್ಕೂ ಹೆಚ್ಚು ಟಚ್‌ಪಾಯಿಂಟ್‌ಗಳೊಂದಿಗೆ, ಕಂಪನಿಯು ಭಾರತೀಯರಿಗೆ ದೊಡ್ಡ ಕನಸುಗಳನ್ನು ಕಾಣಲು ಮತ್ತು ತಮ್ಮ ಆಕಾಂಕ್ಷೆಗಳನ್ನು ಪೂರೈಸಲು ಸಶಕ್ತಗೊಳಿಸುವ ಗುರಿಯನ್ನು ಹೊಂದಿದೆ. ಟಿವಿಎಸ್ ಮೋಟಾರ್ ಕಂಪನಿ ಲಿಮಿಟೆಡ್‌ಗೆ ನಂಬರ್ ಒನ್ ಫೈನಾನ್ಷಿಯರ್ ಆಗಿದೆ ಮತ್ತು ಪ್ರಮುಖ ಗೃಹೋಪಯೋಗಿ ಮತ್ತು ಮೊಬೈಲ್ ಫೋನ್ ಫೈನಾನ್ಷಿಯರ್‌ಗಳಲ್ಲಿ ಒಂದಾಗಿದೆ, ಟಿವಿಎಸ್ ಕ್ರೆಡಿಟ್ ಉಪಯೋಗಿಸಿದ ಕಾರು ಲೋನ್‌ಗಳು, ಟ್ರ್ಯಾಕ್ಟರ್ ಲೋನ್‌ಗಳು, ಉಪಯೋಗಿಸಿದ ಕಮರ್ಷಿಯಲ್ ವೆಹಿಕಲ್ ಲೋನ್‌ಗಳು ಮತ್ತು ಭದ್ರತೆ ರಹಿತ ಲೋನ್‌ಗಳಲ್ಲಿ ವೇಗವಾಗಿ ಬೆಳೆಯುತ್ತಿರುವ ಹೆಜ್ಜೆಗುರುತನ್ನು ಹೊಂದಿದೆ. ದೃಢವಾದ ಹೊಸ-ಯುಗದ ತಂತ್ರಜ್ಞಾನಗಳು ಮತ್ತು ಡೇಟಾ ವಿಶ್ಲೇಷಣೆಯಿಂದ ಚಾಲಿತ, ಕಂಪನಿಯು ಸುಮಾರು 1.8 ಕೋಟಿ ಸಂತೃಪ್ತ ಗ್ರಾಹಕರಿಗೆ ಸೇವೆ ಸಲ್ಲಿಸಿದೆ.

ಮಾಧ್ಯಮ ಸಂಪರ್ಕಗಳು:

ಪೌಲ್ ಎಬೆನೆಜರ್

ಮೊಬೈಲ್: +91 7397398709

ಇಮೇಲ್: paul.ebenezer@tvscredit.com

 


  • ಇದನ್ನು ಇಲ್ಲಿ ಹಂಚಿಕೊಳ್ಳಿ
  • Share it on Facebook
  • Share it on Twitter
  • Share it on Linkedin

ಇತ್ತೀಚಿನ ಅಪ್ಡೇಟ್‌ಗಳು ಮತ್ತು ಆಫರ್‌ಗಳಿಗಾಗಿ ಸೈನ್ ಅಪ್ ಮಾಡಿ

ವಾಟ್ಸಾಪ್

ಆ್ಯಪ್ ಡೌನ್ಲೋಡ್ ಮಾಡಿ

ಸಂಪರ್ಕದಲ್ಲಿರಿ