>
ಸೇವೆಯ ನಿಯಮಗಳು - ಅಂಗೀಕಾರ
ದಯವಿಟ್ಟು ಈ ವೆಬ್‌ಸೈಟನ್ನು ಅಕ್ಸೆಸ್ ಮಾಡುವ ಅಥವಾ ಬಳಸುವ ಮೊದಲು ಬಳಕೆಯ ನಿಯಮ ಮತ್ತು ಷರತ್ತುಗಳನ್ನು ಓದಿ. ಈ ಸೈಟನ್ನು ಅಕ್ಸೆಸ್ ಮಾಡುವ ಮೂಲಕ ಅಥವಾ ಬಳಸುವ ಮೂಲಕ, ಯಾವುದೇ ಮಿತಿ ಅಥವಾ ಅರ್ಹತೆಯ ಹಂಗಿಲ್ಲದೆ, ಈ ಬಳಕೆಯ ನಿಯಮ ಮತ್ತು ಷರತ್ತುಗಳಿಗೆ ಬದ್ಧರಾಗಿರಲು ನೀವು ಒಪ್ಪಿಕೊಳ್ಳುತ್ತೀರಿ. ಇಲ್ಲಿ ತಿಳಿಸಲಾದ ಯಾವುದೇ ನಿಯಮ ಮತ್ತು ಷರತ್ತುಗಳನ್ನು ನೀವು ಅಂಗೀಕರಿಸದಿದ್ದರೆ, ದಯವಿಟ್ಟು ಈ ಸೈಟನ್ನು ಬಳಸಬೇಡಿ. ಟಿವಿಎಸ್ ಕ್ರೆಡಿಟ್, ತನ್ನ ಸ್ವಂತ ವಿವೇಚನೆಯಲ್ಲಿ, ಯಾವುದೇ ಸಮಯದಲ್ಲಿ ಈ ವೆಬ್ ಪೇಜನ್ನು ಅಪ್ಡೇಟ್ ಮಾಡುವ ಮೂಲಕ ಈ ನಿಯಮ ಮತ್ತು ಷರತ್ತುಗಳನ್ನು ಮಾರ್ಪಾಡು ಮಾಡಬಹುದು ಅಥವಾ ಪರಿಷ್ಕರಿಸಬಹುದು. ನೀವು ಅಂತಹ ಯಾವುದೇ ಮಾರ್ಪಾಡು ಅಥವಾ ಪರಿಷ್ಕರಣೆಗೆ ಬದ್ಧರಾಗಿರುತ್ತೀರಿ. ಈ ಸೈಟ್ ಬಳಸುವ ಮೊದಲು ನೀವು ಗೌಪ್ಯತಾ ನೀತಿಯನ್ನು ಕೂಡ ಓದಬಹುದು.
ವಾರಂಟಿ ಹಕ್ಕು ನಿರಾಕರಣೆ – ಈ ಮಾಹಿತಿಯ ನಿಖರತೆ, ಪ್ರವೇಶ ಸಾಧ್ಯತೆ, ಸಮಗ್ರತೆ ಮತ್ತು ಕಾಲಾವಧಿಯನ್ನು ಖಚಿತಪಡಿಸಿಕೊಳ್ಳಲು ಟಿವಿಎಸ್ ಕ್ರೆಡಿಟ್ ಪ್ರತಿಯೊಂದು ಪ್ರಯತ್ನವನ್ನು ಮಾಡುತ್ತದೆ. ಆದರೆ ಟಿವಿಎಸ್ ಕ್ರೆಡಿಟ್ ಮೇಲಿನವುಗಳಿಗೆ ಯಾವುದೇ ಭರವಸೆ ನೀಡುವುದಿಲ್ಲ ಅಥವಾ ಖಾತರಿ ನೀಡುವುದಿಲ್ಲ. ಈ ಸೈಟ್‌ನಲ್ಲಿರುವ ವಿಷಯದಲ್ಲಿನ ಯಾವುದೇ ದೋಷಗಳು ಅಥವಾ ಲೋಪಗಳಿಗೆ ಟಿವಿಎಸ್ ಕ್ರೆಡಿಟ್ ಯಾವುದೇ ಹೊಣೆಗಾರಿಕೆ ಅಥವಾ ಜವಾಬ್ದಾರಿಯನ್ನು ಹೊಂದಿರುವುದಿಲ್ಲ ಮತ್ತು ಈ ವೆಬ್‌ಸೈಟ್ ಬಳಕೆಗೆ ಸಂಬಂಧಿಸಿದಂತೆ ಉಂಟಾದ ಯಾವುದೇ ನಷ್ಟಕ್ಕೆ ಯಾವುದೇ ರೀತಿಯ ಹೊಣೆಗಾರಿಕೆಯನ್ನು ನಿರಾಕರಿಸುತ್ತದೆ. ಯಾವುದೇ ಮುನ್ಸೂಚನೆ ಇಲ್ಲದೆ, ಟಿವಿಎಸ್ ಕ್ರೆಡಿಟ್ ಈ ವಿಷಯಕ್ಕೆ ಯಾವುದೇ ಸಮಯದಲ್ಲಿ ಬದಲಾವಣೆಗಳನ್ನು ಮಾಡಬಹುದು. ವೆಬ್‌ಸೈಟ್‌ನಲ್ಲಿ ನಮೂದಿಸಿದ ಪ್ರಾಡಕ್ಟ್‌ಗಳು ಮತ್ತು ಸೇವೆಗಳು ಲಭ್ಯತೆಗೆ ಒಳಪಟ್ಟಿರುತ್ತವೆ. ಈ ವೆಬ್‌ಸೈಟ್‌ನಲ್ಲಿ ಪ್ರದರ್ಶಿಸಲಾದ ಪ್ರೋಗ್ರಾಮ್‌ಗಳು ಮತ್ತು ಸೇವೆಗಳ ವಿವರಗಳ ಬಗ್ಗೆ ಮಾಹಿತಿಯು ನಿಜವಾದ ನಿರ್ದಿಷ್ಟತೆಗಳಿಗಿಂತ ಭಿನ್ನವಾಗಿರಬಹುದು ಅಥವಾ ಬದಲಾಗಬಹುದು; ಆದ್ದರಿಂದ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೊದಲು ನೀವು ಟಿವಿಎಸ್ ಕ್ರೆಡಿಟ್ ಅನ್ನು ಸಂಪರ್ಕಿಸಲು ಬಲವಾಗಿ ಶಿಫಾರಸು ಮಾಡಲಾಗುತ್ತದೆ.
ನಿರಾಕರಣೆ - ಈ ಸೈಟ್ ಅನ್ನು ನಮೂದಿಸುವ ಮೂಲಕ ನಿಮ್ಮ ಬಳಕೆ ನಿಮ್ಮ ಸ್ವಂತ ಅಪಾಯದಲ್ಲಿದೆ ಎಂದು ನೀವು ಅಂಗೀಕರಿಸುತ್ತೀರಿ ಮತ್ತು ಒಪ್ಪುತ್ತೀರಿ ಮತ್ತು ಈ ಸೈಟ್‌ಗೆ ಪ್ರವೇಶ, ಬಳಕೆ ಅಥವಾ ಬ್ರೌಸಿಂಗ್ ಮೂಲಕ ಅಥವಾ ಈ ಸೈಟ್ ಮೂಲಕ ಯಾವುದೇ ಮೆಟೀರಿಯಲ್‌ಗಳು, ಡೇಟಾ, ಪಠ್ಯ, ಚಿತ್ರಗಳು, ವೀಡಿಯೊ ಅಥವಾ ಆಡಿಯೊವನ್ನು ನೀವು ಡೌನ್‌ಲೋಡ್ ಮಾಡುವ ಮೂಲಕ, ಯಾವುದೇ ವೈರಸ್‌ಗಳಿಂದ, ದೋಷಗಳಿಂದ, ಮಾನವ ಕ್ರಿಯೆಯಿಂದ ಅಥವಾ ನಿಷ್ಕ್ರಿಯತೆಯಿಂದ ಅಥವಾ ಯಾವುದೇ ಕಂಪ್ಯೂಟರ್ ಸಿಸ್ಟಮ್, ಫೋನ್ ಲೈನ್, ಹಾರ್ಡ್‌ವೇರ್, ಸಾಫ್ಟ್‌ವೇರ್ ಅಥವಾ ಪ್ರೋಗ್ರಾಂನ ಅಸಮರ್ಪಕ ಕಾರ್ಯಗಳಿಂದ ಅಥವಾ ಯಾವುದೇ ಇತರ ದೋಷಗಳು, ವೈಫಲ್ಯಗಳು ಅಥವಾ ಕಂಪ್ಯೂಟರ್ ಪ್ರಸರಣಗಳು ಅಥವಾ ನೆಟ್‌ವರ್ಕ್ ಸಂಪರ್ಕಗಳಲ್ಲಿನ ವಿಳಂಬಗಳನ್ನು ಒಳಗೊಂಡಂತೆ ಆದರೆ ಅದಕ್ಕೆ ಮಾತ್ರ ಸೀಮಿತವಾಗಿರದೆ ಈ ಸೈಟ್‌ಗೆ ಪ್ರವೇಶ, ಬಳಕೆ ಅಥವಾ ಬ್ರೌಸಿಂಗ್‌ನಿಂದಾಗಿ ಅಥವಾ ನಿಮ್ಮ ಡೌನ್‌ಲೋಡ್ ಮೂಲಕ ನೇರವಾಗಿ ಅಥವಾ ಪರೋಕ್ಷವಾಗಿ ಉದ್ಭವಿಸಬಹುದಾದ ಯಾವುದೇ ರೀತಿಯ ನೇರ, ಪ್ರಾಸಂಗಿಕ, ತತ್ಪರಿಣಾಮವಾದ, ಪರೋಕ್ಷ, ಅಥವಾ ದಂಡನಾತ್ಮಕ ಹಾನಿಗಳು, ಅಥವಾ ಯಾವುದೇ ರೀತಿಯ ನಷ್ಟಗಳು, ವೆಚ್ಚಗಳು ಅಥವಾ ಖರ್ಚುಗಳಿಗೆ (ಕಾನೂನು ಶುಲ್ಕಗಳು, ತಜ್ಞರ ಶುಲ್ಕಗಳು ಅಥವಾ ಇತರ ವಿತರಣೆಗಳು ಸೇರಿದಂತೆ) ಈ ಸೈಟ್ ಅನ್ನು ರಚಿಸಿದ, ಉತ್ಪಾದಿಸಿದ ಅಥವಾ ವಿತರಣೆಯಲ್ಲಿ ತೊಡಗಿರುವ ಯಾವುದೇ ಪಕ್ಷಗಳು ಜವಾಬ್ದಾರರಾಗಿರುವುದಿಲ್ಲ.
ಬೇರೆ ಸೈಟ್‌ಗಳಿಗೆ ಲಿಂಕ್‌ಗಳು – ಈ ಸೈಟ್ ಬೇರೆ ಸೈಟ್‌ಗಳಿಗೆ ಲಿಂಕ್ ಆಗಿದ್ದರೂ, ಲಿಂಕ್ ಆದ ಸೈಟ್‌ನೊಂದಿಗೆ ಟಿವಿಎಸ್ ಕ್ರೆಡಿಟ್ ನೇರವಾಗಿ ಅಥವಾ ಪರೋಕ್ಷವಾಗಿ, ನಿರ್ದಿಷ್ಟವಾಗಿ ಅದರಲ್ಲಿ ತಿಳಿಸದ ಹೊರತು ಯಾವುದೇ ಅನುಮೋದನೆ, ಸಂಘಟನೆ, ಪ್ರಾಯೋಜಕತ್ವ, ಧೃಡೀಕರಣ ಅಥವಾ ಸಂಬಂಧವನ್ನು ಸೂಚಿಸುವುದಿಲ್ಲ. ಈ ಸೈಟ್ ಅನ್ನು ಪ್ರವೇಶಿಸುವ ಮೂಲಕ ಈ ಸೈಟ್‌ಗೆ ಲಿಂಕ್ ಆಗಿರುವ ಎಲ್ಲಾ ಸೈಟ್‌ಗಳನ್ನು ಟಿವಿಎಸ್ ಕ್ರೆಡಿಟ್ ರಿವ್ಯೂ ಮಾಡಿಲ್ಲ ಮತ್ತು ಅದು ಈ ಸೈಟ್‌ಗೆ ಲಿಂಕ್ ಆಗಿರುವ ಯಾವುದೇ ಆಫ್-ಸೈಟ್ ಪೇಜ್‌ಗಳು ಅಥವಾ ಇತರ ಸೈಟ್‌ಗಳ ವಿಷಯಕ್ಕೆ ಜವಾಬ್ದಾರರಾಗಿರುವುದಿಲ್ಲ ಎಂದು ನೀವು ಒಪ್ಪಿಕೊಳ್ಳುತ್ತೀರಿ. ಇತರ ಯಾವುದೇ ಆಫ್-ಸೈಟ್ ಪೇಜ್‌ಗಳು ಅಥವಾ ಇತರ ಸೈಟ್‌ಗಳಿಗೆ ಲಿಂಕ್ ಮಾಡುವುದು ನಿಮ್ಮ ಸ್ವಂತ ಜವಾಬ್ದಾರಿಯಾಗಿರುತ್ತದೆ. ಆ ಲಿಂಕ್‌ಗಳು ಮತ್ತು ಸಂಪನ್ಮೂಲಗಳಲ್ಲಿ ಟಿವಿಎಸ್ ಕ್ರೆಡಿಟ್ ಲಭ್ಯತೆ ಮತ್ತು ಸೇವೆಗಳ ವಿಷಯವನ್ನು ನಿಯಂತ್ರಿಸುವುದಿಲ್ಲ. ಅಂತಹ ಯಾವುದೇ ಸೇವೆಗಳು ಅಥವಾ ಸಂಪನ್ಮೂಲ ಅಥವಾ ಅದಕ್ಕೆ ಸಂಬಂಧಿಸಿದ ಯಾವುದೇ ಕಳಕಳಿಗಳನ್ನು ಆಯಾ ಸೇವೆ ಅಥವಾ ಸಂಪನ್ಮೂಲಕ್ಕೆ ನಿರ್ದೇಶಿಸಬೇಕು. ಟಿವಿಎಸ್ ಕ್ರೆಡಿಟ್ ಇಲ್ಲಿ ಒದಗಿಸಲಾದ ಹೈಪರ್‌ಲಿಂಕ್‌ಗಳ ಕಂಟೆಂಟ್ ಅಥವಾ ಮೆಟೀರಿಯಲ್ ಅನ್ನು ಅನುಮೋದಿಸುವುದಿಲ್ಲ. ಈ ಸೈಟ್‌ನಿಂದ ಲಿಂಕ್ ಮಾಡಲು ದಯವಿಟ್ಟು ಇತರ ವೆಬ್‌ಸೈಟ್‌ಗಳಿಂದ ಅಗತ್ಯವಿರುವ ಅನುಮತಿಯನ್ನು ತೆಗೆದುಕೊಳ್ಳಿ.
ಅಕ್ಸೆಸ್ ಟರ್ಮಿನೇಶನ್ – ಟಿವಿಎಸ್ ಕ್ರೆಡಿಟ್ ತನ್ನ ಸ್ವಂತ ವಿವೇಚನೆಯಿಂದ ಯಾವುದೇ ಸೂಚನೆ ಇಲ್ಲದೆ ಯಾವುದೇ ಸಮಯದಲ್ಲಿ ವೆಬ್‌ಸೈಟ್ ಅಥವಾ ಅದರ ಯಾವುದೇ ಭಾಗಕ್ಕೆ ನಿಮ್ಮ ಅಕ್ಸೆಸ್ ಅನ್ನು ನಿಲ್ಲಿಸುವ ಹಕ್ಕನ್ನು ಹೊಂದಿರುತ್ತದೆ.
ನಷ್ಟ ಪರಿಹಾರ – ಈ ವೆಬ್‌ಸೈಟ್‌ನ ನಿಮ್ಮ ಬಳಕೆಯಿಂದ ಉಂಟಾಗುವ ಅಥವಾ ಅದಕ್ಕೆ ಸಂಬಂಧಿಸಿದಂತೆ ಯಾವುದೇ ಥರ್ಡ್ ಪಾರ್ಟಿಯಿಂದ ಮಾಡಲಾದ ಸಮಂಜಸವಾದ ಅಟಾರ್ನಿ ಶುಲ್ಕಗಳು ಸೇರಿದಂತೆ ಯಾವುದೇ ಕ್ಲೈಮ್, ಬೇಡಿಕೆ, ಕ್ರಿಯೆ ಅಥವಾ ಹಾನಿಯಿಂದ ನೀವು ಟಿವಿಎಸ್ ಕ್ರೆಡಿಟ್, ಅದರ ಪೋಷಕ ಕಂಪನಿಗಳು, ಅಂಗಸಂಸ್ಥೆಗಳು, ಅಧೀನ ಸಂಸ್ಥೆಗಳು, ಅಧಿಕಾರಿಗಳು, ನಿರ್ದೇಶಕರು, ಏಜೆಂಟ್‌ಗಳು, ಉದ್ಯೋಗಿಗಳು, ಕೋ-ಬ್ರ್ಯಾಂಡರ್‌ಗಳು ಅಥವಾ ಇತರ ಪಾಲುದಾರರು ಮತ್ತು ಪೂರೈಕೆದಾರರಿಗೆ ನಷ್ಟ ಪರಿಹಾರ ನೀಡಲು ಮತ್ತು ಹೊಣೆಗಾರಿಕೆಯನ್ನು ಹೊರಿಸದಿರಲು ನೀವು ಒಪ್ಪಿಕೊಳ್ಳುತ್ತೀರಿ.
ಬಳಕೆ – ಬಳಕೆದಾರರಿಂದ ವೆಬ್‌ಸೈಟ್ ಬಳಕೆಯು ಬಳಕೆದಾರರು ಮತ್ತು ಟಿವಿಎಸ್ ಕ್ರೆಡಿಟ್ ನಡುವಿನ ಜಂಟಿ ಉದ್ಯಮ, ಪಾಲುದಾರಿಕೆ, ಉದ್ಯೋಗ ಅಥವಾ ಏಜೆನ್ಸಿ ಸಂಬಂಧವನ್ನು ಹೊಂದಿಲ್ಲ ಎಂದು ಬಳಕೆದಾರರು ಒಪ್ಪಿಕೊಳ್ಳುತ್ತಾರೆ. ಟಿವಿಎಸ್ ಕ್ರೆಡಿಟ್ ಮತ್ತು ಟಿವಿಎಸ್ ಕ್ರೆಡಿಟ್‌ನ ಪ್ರತಿನಿಧಿ, ಏಜೆಂಟ್ ಅಥವಾ ಉದ್ಯೋಗಿಯಾಗಿ ನಿಮ್ಮನ್ನು ನೀವು ಹಿಡಿದಿಟ್ಟುಕೊಳ್ಳದಿರಲು ನೀವು ಒಪ್ಪುತ್ತೀರಿ ಮತ್ತು ಬಳಕೆದಾರರ ಯಾವುದೇ ಪ್ರಾತಿನಿಧ್ಯ, ಕ್ರಿಯೆ ಅಥವಾ ಲೋಪಕ್ಕೆ ಜವಾಬ್ದಾರರಾಗಿರುವುದಿಲ್ಲ.
ಕಾನೂನು ನ್ಯಾಯವ್ಯಾಪ್ತಿ – ವೆಬ್‌ಸೈಟ್‌ನ ಬಳಕೆಗೆ ಸಂಬಂಧಿಸಿದಂತೆ ಅಥವಾ ಉದ್ಭವಿಸಬಹುದಾದ ಎಲ್ಲಾ ವಿವಾದಗಳಿಗೆ ಸಂಬಂಧಿಸಿದಂತೆ ಚೆನ್ನೈನ ನ್ಯಾಯಾಲಯಗಳು ವಿಶೇಷ ನ್ಯಾಯವ್ಯಾಪ್ತಿಯನ್ನು ಹೊಂದಿರುತ್ತವೆ. ಈ ನಿಯಮ ಮತ್ತು ಷರತ್ತುಗಳ ವ್ಯಾಖ್ಯಾನವನ್ನು ಕಾನೂನು ನಿಬಂಧನೆಗಳ ಸಂಘರ್ಷಕ್ಕೆ ಪರಿಣಾಮ ಬೀರದೆ ಭಾರತದ ಒಕ್ಕೂಟದ ಕಾನೂನುಗಳಿಗೆ ಅನುಸಾರವಾಗಿರುತ್ತವೆ ಮತ್ತು ನಿಯಂತ್ರಿಸಲ್ಪಡುತ್ತವೆ.
ರಿಫಂಡ್ ಮತ್ತು ಕ್ಯಾನ್ಸಲೇಶನ್ ಪಾಲಿಸಿ – ಟಿವಿಎಸ್ ಕ್ರೆಡಿಟ್‌ನ ಆಂತರಿಕ ಪಾಲಿಸಿಯ ಪ್ರಕಾರ ರಿಫಂಡ್‌ಗಳನ್ನು ಪ್ರಕ್ರಿಯೆಗೊಳಿಸಲಾಗುತ್ತದೆ. ಕ್ಯಾನ್ಸಲೇಶನ್ ಮತ್ತು ರಿಫಂಡ್‌ಗೆ ಸಂಬಂಧಿಸಿದ ಎಲ್ಲಾ ವಿಷಯಗಳಲ್ಲಿ, ಟಿವಿಎಸ್ ಕ್ರೆಡಿಟ್ ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ಹೊಂದಿರುತ್ತದೆ.
ಗೌಪ್ಯತಾ ನೀತಿ
1. ನಿಮ್ಮ ಗೌಪ್ಯತೆಯನ್ನು ರಕ್ಷಿಸಲು ನಾವು ಬದ್ಧರಾಗಿದ್ದೇವೆ. ಈ ಗೌಪ್ಯತಾ ನೀತಿಯು ಈ ವೆಬ್‌ಸೈಟ್‌ಗೆ ಸಂಬಂಧಿಸಿದ ಎಲ್ಲಾ ವೆಬ್ ಪುಟಗಳಿಗೆ ಅನ್ವಯಿಸುತ್ತದೆ.
2. ವೆಬ್‌ಸೈಟ್‌ನಲ್ಲಿ ಆನ್‌ಲೈನ್ ಫಾರ್ಮ್‌ಗಳಲ್ಲಿ ಸಂಗ್ರಹಿಸಲಾದ ಎಲ್ಲಾ ಮಾಹಿತಿಯನ್ನು ಈ ಸೇವೆಗೆ ಚಂದಾದಾರರಾಗಿರುವ ಬಳಕೆದಾರರನ್ನು ವೈಯಕ್ತಿಕವಾಗಿ ಗುರುತಿಸಲು ಬಳಸಲಾಗುತ್ತದೆ. ಈ ಸೇವೆಗೆ ಬಳಕೆಯ ನಿಯಮ ಮತ್ತು ಷರತ್ತುಗಳಲ್ಲಿ ತಿಳಿಸಲಾಗಿರುವುದನ್ನು ಹೊರತುಪಡಿಸಿ ಬೇರೆ ಯಾವುದಕ್ಕೂ ಮಾಹಿತಿಯನ್ನು ಬಳಸಲಾಗುವುದಿಲ್ಲ. ಯಾವುದೇ ಮಾಹಿತಿಯನ್ನು ಯಾರಿಗೂ ಮಾರಾಟ ಮಾಡಲಾಗುವುದಿಲ್ಲ ಅಥವಾ ಲಭ್ಯವಾಗುವಂತೆ ಮಾಡುವುದಿಲ್ಲ. ನಿಮ್ಮ ವೈಯಕ್ತಿಕ ಮಾಹಿತಿಯನ್ನು ರಕ್ಷಿಸಲು ಸಹಾಯ ಮಾಡಲು ನಾವು ವಾಣಿಜ್ಯವಾಗಿ ಸಮಂಜಸವಾದ ಭದ್ರತಾ ಕ್ರಮಗಳನ್ನು (ಭೌತಿಕ, ತಾಂತ್ರಿಕ ಮತ್ತು ಕಾರ್ಯವಿಧಾನದ ಕ್ರಮಗಳನ್ನು ಒಳಗೊಂಡಂತೆ) ಬಳಸುತ್ತೇವೆ. ಆದಾಗ್ಯೂ, ಎಲೆಕ್ಟ್ರಾನಿಕ್ ಆಗಿ ಮಾಹಿತಿಯನ್ನು ರವಾನಿಸಲು ಅಥವಾ ಸಂಗ್ರಹಿಸಲು ಯಾವುದೇ ವ್ಯವಸ್ಥೆಯು ಸಂಪೂರ್ಣವಾಗಿ ಸುರಕ್ಷಿತವಾಗಿರುವುದಿಲ್ಲ. ಆದ್ದರಿಂದ, ವೈಯಕ್ತಿಕ ಮಾಹಿತಿ ಅಥವಾ ಇತರ ಸಂವಹನಗಳು ಯಾವಾಗಲೂ ಸುರಕ್ಷಿತವಾಗಿರುತ್ತವೆ ಎಂದು ನಾವು ಖಾತರಿಪಡಿಸಲು ಸಾಧ್ಯವಿಲ್ಲ.
3. ಈ ವೆಬ್‌ಸೈಟ್ ಬಳಸುವ ಮೂಲಕ, ನಮ್ಮ ಗೌಪ್ಯತಾ ನೀತಿಗೆ ನಿಮ್ಮ ಅಂಗೀಕಾರವನ್ನು ನೀವು ಸೂಚಿಸುತ್ತೀರಿ. ನೀವು ಈ ಪಾಲಿಸಿಯನ್ನು ಒಪ್ಪಿಕೊಳ್ಳದಿದ್ದರೆ, ದಯವಿಟ್ಟು ನಮ್ಮ ಸೈಟ್ ಬಳಸಬೇಡಿ. ಈ ನಿಯಮಗಳಿಗೆ ಬದಲಾವಣೆಗಳನ್ನು ಪೋಸ್ಟ್ ಮಾಡಿದ ನಂತರದಲ್ಲಿ ನೀವು ವೆಬ್‌ಸೈಟ್ ಬಳಸುವುದನ್ನು ಮುಂದುವರಿಸಿದರೆ ನೀವು ಆ ಬದಲಾವಣೆಗಳನ್ನು ಒಪ್ಪಿಕೊಂಡಿದ್ದೀರಿ ಎಂದು ಪರಿಗಣಿಸಲಾಗುತ್ತದೆ.
ಮುಂಗಡ ಪಾವತಿ ಮಾಡಲು ನಿಯಮ ಮತ್ತು ಷರತ್ತುಗಳು
1. ನಿಮ್ಮ ಸಾಲದ ಅಕೌಂಟ್‌ನಲ್ಲಿ ಯಾವುದೇ ಬಾಕಿ ಮೊತ್ತವಿಲ್ಲದಿದ್ದರೆ. ನೀವು ಯಾವುದೇ ಪಾವತಿ ಮಾಡುವ ಅಗತ್ಯವಿಲ್ಲ. ಆದರೆ, ನೀವು ಮುಂಗಡ ಪಾವತಿ ಮಾಡಲು ಆಯ್ಕೆ ಮಾಡಿದರೆ, ಅದನ್ನು ಭವಿಷ್ಯದ ಇಎಂಐನಲ್ಲಿ ಸರಿ ಹೊಂದಿಸಲಾಗುತ್ತದೆ. ಯಾವುದೇ ಮುಂಗಡ ಪಾವತಿ ಮಾಡುವ ಮೊದಲು ದಯವಿಟ್ಟು ಈ ಕೆಳಗಿನದನ್ನು ಗಮನಿಸಿ:
2. ವಿವರಣೆ: ಇಎಂಐ ಗಡುವು ದಿನಾಂಕ 03.01.2025
ಪಾವತಿ ಗೇಟ್‌ವೇ ನಿಯಮ ಮತ್ತು ಷರತ್ತುಗಳ ಹಕ್ಕುತ್ಯಾಗ
1. ಟಿವಿಎಸ್ ಕ್ರೆಡಿಟ್ ಸರ್ವಿಸ್ ಲಿಮಿಟೆಡ್ (“ಟಿವಿಎಸ್ ಕ್ರೆಡಿಟ್”) ನ ಗ್ರಾಹಕರು (“ಗ್ರಾಹಕರು”) ತಮ್ಮ ಆನ್ಲೈನ್ ಸಾಲದ ಖಾತೆಗಳ ಅಡಿಯಲ್ಲಿ ತಮ್ಮ ಬಾಕಿಗಳನ್ನು ಟಿವಿಎಸ್ ಕ್ರೆಡಿಟ್‌ಗೆ ಪಾವತಿ ಸೇವಾ ಪೂರೈಕೆದಾರರ ಮೂಲಕ ಆಯೋಜಿಸಲಾದ ಎಲೆಕ್ಟ್ರಾನಿಕ್ ಮತ್ತು ಸ್ವಯಂಚಾಲಿತ ಸಂಗ್ರಹಣೆ ಮತ್ತು ರವಾನೆ ಸೇವೆಯ ಮೂಲಕ ಪಾವತಿಸಲು ಈ ಸೇವೆಯನ್ನು ಒದಗಿಸಲಾಗುತ್ತಿದೆ. ಈ ಉದ್ದೇಶಕ್ಕಾಗಿ ನಿರ್ದಿಷ್ಟಪಡಿಸಿದ ಪೇಮೆಂಟ್ ಗೇಟ್‌ವೇಯ ಕಾರ್ಯಾಚರಣೆಯ ಬಗ್ಗೆ ಟಿವಿಎಸ್ ಕ್ರೆಡಿಟ್ ಯಾವುದೇ ರೀತಿಯ, ವ್ಯಕ್ತ ಅಥವಾ ಸೂಚಿತ ಪ್ರಾತಿನಿಧ್ಯವನ್ನು ವಹಿಸುವುದಿಲ್ಲ. ಮೇಲೆ ತಿಳಿಸಲಾದ ಆನ್‌ಲೈನ್ ಪಾವತಿ ಸೇವೆಯ ಬಳಕೆಯನ್ನು ಸಂಪೂರ್ಣವಾಗಿ ತಮ್ಮ ಸ್ವಂತ ವಿವೇಚನೆ ಮತ್ತು ಜವಾಬ್ದಾರಿಯಿಂದ ಮಾಡಲಾಗುತ್ತದೆ ಎಂಬುದನ್ನು ಗ್ರಾಹಕರು ಸ್ಪಷ್ಟವಾಗಿ ಒಪ್ಪುತ್ತಾರೆ.
2. ಬಾಧ್ಯತೆಯ ಮಿತಿಗಳು
3. ಡೆಬಿಟ್ ಕಾರ್ಡ್, ಬ್ಯಾಂಕ್ ಅಕೌಂಟ್ ವಿವರಗಳು
ಡೆಬಿಟ್ ಕಾರ್ಡ್ ಬಳಸಿ ಅಥವಾ ನಿಮ್ಮ ಇಂಟರ್ನೆಟ್ ಬ್ಯಾಂಕಿಂಗ್ ಅಕೌಂಟ್ ಮೂಲಕ ನಿಮ್ಮ ಸಾಲದ ನಿಮ್ಮ ಬಾಕಿಗಳನ್ನು ಟಿವಿಎಸ್ ಕ್ರೆಡಿಟ್‌ಗೆ ಪಾವತಿಸಬಹುದು. ಪಾವತಿ ಟ್ರಾನ್ಸಾಕ್ಷನ್ ಪ್ರಕ್ರಿಯೆಗಾಗಿ ಪಾವತಿ ಸೇವಾ ಪೂರೈಕೆದಾರರಿಗೆ ನೀವು ಒದಗಿಸಿದ ಡೆಬಿಟ್ ಕಾರ್ಡ್ ವಿವರಗಳು ಸರಿಯಾಗಿರುತ್ತವೆ ಮತ್ತು ನೀವು ಕಾನೂನುಬದ್ಧವಾಗಿ ಒಡೆತನ ಹೊಂದಿಲ್ಲದ ಡೆಬಿಟ್ ಕಾರ್ಡ್ ಬಳಸುವುದಿಲ್ಲ ಎಂಬುದನ್ನು ನೀವು ಸಲ್ಲಿಸುತ್ತೀರಿ ಮತ್ತು ಅದನ್ನು ಒಪ್ಪುತ್ತೀರಿ. ನೀವು ಪಾವತಿ ಟ್ರಾನ್ಸಾಕ್ಷನ್ ಆರಂಭಿಸಿದಾಗ ಮತ್ತು/ಅಥವಾ ಆನ್ಲೈನ್ ಪಾವತಿ ಸೂಚನೆಯನ್ನು ನೀಡಿದಾಗ ಮತ್ತು ನಿಮ್ಮ ಡೆಬಿಟ್ ಅಥವಾ ಬ್ಯಾಂಕ್ ಅಕೌಂಟ್ ವಿವರಗಳನ್ನು ಒದಗಿಸಿದಾಗ ನೀವು ಇದನ್ನು ಒಪ್ಪುತ್ತೀರಿ:
ಎಸ್ಎಂಎಸ್ ಸಂವಹನಕ್ಕೆ ಅನ್ವಯವಾಗುವ ನಿಯಮ ಮತ್ತು ಷರತ್ತುಗಳು
1. ಟಿವಿಎಸ್ ಕ್ರೆಡಿಟ್ ಸರ್ವೀಸಸ್ ಲಿಮಿಟೆಡ್‌ನ ಸ್ವಂತ ವಿವೇಚನೆಯಿಂದ ಮಾತ್ರ ಸಾಲ.
2. ಪ್ರಕ್ರಿಯಾ ಶುಲ್ಕಗಳು ಮತ್ತು ಇತರ ಅನ್ವಯವಾಗುವ ಶುಲ್ಕಗಳನ್ನು ಪಾವತಿಸಬೇಕಾಗುತ್ತದೆ.
3. ಗ್ರಾಹಕರ ಆನ್‌ಬೋರ್ಡಿಂಗ್‌ಗಾಗಿ ಟಿವಿಎಸ್ ಕ್ರೆಡಿಟ್ ಮಾರಾಟ/ಮಾರ್ಕೆಟಿಂಗ್ ಇತ್ಯಾದಿಗಳಲ್ಲಿ ಏಜೆಂಟ್‌ಗಳ ಸೇವೆಗಳನ್ನು ತೊಡಗಿಸಬಹುದು.
4. ವಿವರವಾದ ನಿಯಮ ಮತ್ತು ಷರತ್ತುಗಳಿಗಾಗಿ ದಯವಿಟ್ಟು ಸಾಲದ ಡಾಕ್ಯುಮೆಂಟ್‌ಗಳನ್ನು ಓದಿ.
ಟಿವಿಎಸ್ ಕ್ರೆಡಿಟ್ ಸರ್ವೀಸಸ್ ಲಿಮಿಟೆಡ್ ಅನ್ನು ಸಂಪರ್ಕಿಸುವುದು – ಈ ಸೈಟ್ ಅನ್ನು ಪ್ರವೇಶಿಸುವ ಮೂಲಕ ಈ ಸೈಟ್ ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಇದೆ ಮತ್ತು ಈ ವೆಬ್‌ಸೈಟ್‌ನಲ್ಲಿ "ನಮ್ಮನ್ನು ಸಂಪರ್ಕಿಸಿ" ವಿಭಾಗವನ್ನು ಬಳಸುವ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಎಂಬುದನ್ನು ನೀವು ಒಪ್ಪಿಕೊಳ್ಳುತ್ತೀರಿ. ಆದರೆ ಎಲ್ಲಾ ಪ್ರಾಯೋಗಿಕ ಮತ್ತು ಕಾನೂನು ಉದ್ದೇಶಗಳಿಗಾಗಿ ಈ ಕೆಳಗೆ ನೀಡಲಾದ ವಿಳಾಸಕ್ಕೆ ಪ್ರಮಾಣೀಕೃತ ಮೇಲ್ ಮೂಲಕ ನಿಮ್ಮ ಸಂವಹನವನ್ನು ಸಲ್ಲಿಸಬೇಕಾಗುತ್ತದೆ:
ಟಿವಿಎಸ್ ಕ್ರೆಡಿಟ್ ಸರ್ವೀಸಸ್ ಲಿಮಿಟೆಡ್,
ನೋಂದಾಯಿತ ಕಚೇರಿ: "ಚೈತನ್ಯ", ನಂ.12, ಖಾದರ್ ನವಾಜ್ ಖಾನ್ ರೋಡ್,
ನುಂಗಂಬಾಕ್ಕಂ, ಚೆನ್ನೈ 600006.
ಕಾರ್ಪೊರೇಟ್ ಆಫೀಸ್: "ಜಯಲಕ್ಷ್ಮಿ ಎಸ್ಟೇಟ್ಸ್", 29, ಹ್ಯಾಡೋಸ್ ರೋಡ್,
ನುಂಗಂಬಾಕ್ಕಂ, ಚೆನ್ನೈ 600006.
ಫೋನ್: +91 44 28277155, +91 44 28277155, 28233834
ಫ್ಯಾಕ್ಸ್: +91 44 28232296
ಇತ್ತೀಚಿನ ಅಪ್ಡೇಟ್‌ಗಳು ಮತ್ತು ಆಫರ್‌ಗಳಿಗಾಗಿ ಸೈನ್ ಅಪ್ ಮಾಡಿ