>
ಬಳಸಿದ ಟೂ ವೀಲರ್ ಲೋನ್ ಎಂಬುದು ಸ್ಮಾರ್ಟ್ ಫೈನಾನ್ಸಿಂಗ್ ಆಯ್ಕೆಯಾಗಿದ್ದು, ತಮ್ಮ ಬಜೆಟ್‌ಗೆ ಒತ್ತಡ ಹಾಕದೆಯೇ ಪೂರ್ವ-ಮಾಲೀಕತ್ವದ ಬೈಕ್ ಅಥವಾ ಸ್ಕೂಟರ್ ಖರೀದಿಸಲು ಬಯಸುವವರಿಗಾಗಿ ವಿನ್ಯಾಸಗೊಳಿಸಲಾಗಿದೆ. ಹೊಚ್ಚ ಹೊಸ ವಾಹನಗಳಿಗೆ ಮಾತ್ರ ಅನ್ವಯವಾಗುವ ಸಾಮಾನ್ಯ ಟೂ ವೀಲರ್ ಲೋನ್‌ಗಳಂತಲ್ಲದೆ, ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳದೆ ವೆಚ್ಚ-ಪರಿಣಾಮಕಾರಿ ಪರ್ಯಾಯವನ್ನು ಬಯಸುವವರಿಗಾಗಿ ಈ ಸಾಲವನ್ನು ವಿನ್ಯಾಸಗೊಳಿಸಲಾಗಿದೆ.
ನೀವು ಮೊದಲ ಬಾರಿಯ ಖರೀದಿದಾರರಾಗಿದ್ದರೂ, ದೈನಂದಿನ ಬಳಕೆಗಾಗಿ ಹೆಚ್ಚುವರಿ ವಾಹನಕ್ಕಾಗಿ ನೋಡುತ್ತಿದ್ದರೂ, ಅಥವಾ ಕಡಿಮೆ ವೆಚ್ಚದಲ್ಲಿ ವಿಶ್ವಾಸಾರ್ಹ ವಾಹನವನ್ನು ಬಯಸುತ್ತಿದ್ದರೂ, ನಮ್ಮ ಬಳಸಿದ ಟೂ ವೀಲರ್ ಲೋನ್‌ಗಳು ಮಾಲೀಕತ್ವವನ್ನು ಸುಲಭ ಮತ್ತು ಕೈಗೆಟಕುವಂತೆ ಮಾಡುತ್ತವೆ. ಸ್ಪರ್ಧಾತ್ಮಕ ಬಡ್ಡಿ ದರಗಳು, ಅನುಕೂಲಕರ ಮರುಪಾವತಿ ಆಯ್ಕೆಗಳು, ಕನಿಷ್ಠ ಪೇಪರ್‌ವರ್ಕ್ ಮತ್ತು ತ್ವರಿತ ಅನುಮೋದನೆಗಳೊಂದಿಗೆ, ನಮ್ಮ ಸಾಲವು ಗುಣಮಟ್ಟದ ಬಳಸಿದ ಬೈಕ್ ಅಥವಾ ಸ್ಕೂಟರ್ ಹೊಂದುವುದನ್ನು ಹಿಂದೆಂದಿಗಿಂತಲೂ ಸುಲಭಗೊಳಿಸುತ್ತದೆ. ನಗರದ ರೈಡ್‌ಗಳಿಗೆ ನಿಮಗೆ ವಿಶ್ವಾಸಾರ್ಹ ಸ್ಕೂಟರ್ ಬೇಕಾಗಿದ್ದರೆ ಅಥವಾ ದೀರ್ಘ ಪ್ರಯಾಣಗಳಿಗಾಗಿ ಬಲವಾದ ಮೋಟಾರ್‌ಸೈಕಲ್ ಅಗತ್ಯವಿದ್ದರೆ, ವ್ಯಾಪಕ ಶ್ರೇಣಿಯ ಬಳಸಿದ ಬೈಕ್‌ಗಳು ಮತ್ತು ಸ್ಕೂಟರ್‌ಗಳಿಂದ ಆಯ್ಕೆಮಾಡಿ ಮತ್ತು ನಮ್ಮ ತೊಂದರೆ ರಹಿತ ಫೈನಾನ್ಸಿಂಗ್‌ನೊಂದಿಗೆ ಒತ್ತಡ-ಮುಕ್ತವಾಗಿ ರೈಡ್ ಮಾಡಿ.
ಟೂ ವೀಲರ್ ಮಾಲೀಕತ್ವವು ನಿಮ್ಮ ದೈನಂದಿನ ಜೀವನಕ್ಕೆ ಅನುಕೂಲ, ಸ್ವಾತಂತ್ರ್ಯ ಮತ್ತು ದಕ್ಷತೆಯನ್ನು ತಂದುಕೊಡುತ್ತದೆ ಎಂಬುದು ನಮಗೆ ತಿಳಿದಿದೆ. ಅದಕ್ಕಾಗಿಯೇ ನಮ್ಮ ಬಳಸಿದ ಟೂ ವೀಲರ್ ಲೋನ್‌ಗಳು ನಿಮ್ಮ ಜೀವನಶೈಲಿಗೆ ಹೊಂದುವ ಪೂರ್ವ-ಮಾಲೀಕತ್ವದ ಬೈಕ್ ಅಥವಾ ಸ್ಕೂಟರ್ ಖರೀದಿಸಲು ನಿಮಗೆ ಅಗತ್ಯವಿರುವ ಹಣಕಾಸಿನ ಬೆಂಬಲವನ್ನು ಒದಗಿಸುತ್ತವೆ. ನಮ್ಮ ಸಾಲಗಳನ್ನು ಫ್ಲೆಕ್ಸಿಬಲ್, ಕೈಗೆಟುಕುವಂತೆ ಮತ್ತು ಸುಗಮವಾಗಿ ಲಭ್ಯವಾಗುವಂತೆ ವಿನ್ಯಾಸಗೊಳಿಸಲಾಗಿದೆ, ಇದು ನಿಮಗೆ ಅರ್ಜಿ ಸಲ್ಲಿಕೆಯಿಂದ ಮರುಪಾವತಿಯವರೆಗೆ ಸುಗಮ ಮತ್ತು ತೊಂದರೆ ರಹಿತ ಅನುಭವವನ್ನು ನೀಡುತ್ತದೆ.
ನಿಮ್ಮ ಬಳಸಿದ ಟೂ ವೀಲರ್ ವಾಹನದ ಮೌಲ್ಯಮಾಪನಕ್ಕೆ 90% ವರೆಗೆ ಫೈನಾನ್ಸಿಂಗ್ ಪಡೆಯಿರಿ.
ಗರಿಷ್ಠ ಉಳಿತಾಯಕ್ಕಾಗಿ ನಮ್ಮ ಬಳಸಿದ ಟೂ ವೀಲರ್ ಲೋನ್‌ಗಳಿಗೆ ಕನಿಷ್ಠ ಪ್ರಕ್ರಿಯಾ ಶುಲ್ಕವನ್ನು ಆನಂದಿಸಿ.
ನಮ್ಮ ಬಳಸಿದ ಟೂ ವೀಲರ್ ಲೋನ್‌ಗಳೊಂದಿಗೆ ಸುಲಭ ಮತ್ತು ಹೊಂದಿಕೊಳ್ಳುವ ಮಾಸಿಕ ಮರುಪಾವತಿಗಳನ್ನು ಆನಂದಿಸಿ.
ಯಾವುದೇ ಗುಪ್ತ ವೆಚ್ಚಗಳಿಲ್ಲದೆ ಬರುವ ನಮ್ಮ ಬಳಸಿದ ಟೂ ವೀಲರ್ ಲೋನ್‌ಗಳು, ಪಾರದರ್ಶಕತೆಯನ್ನು ಖಚಿತಪಡಿಸುತ್ತವೆ.
ನಿಮ್ಮ ಬಳಸಿದ ಟೂ ವೀಲರ್‌ನ ಫೈನಾನ್ಸಿಂಗ್‌ಗಾಗಿ ತ್ವರಿತ ಮತ್ತು ತೊಂದರೆ ರಹಿತ ಸಾಲದ ಅನುಮೋದನೆಯನ್ನು ಆನಂದಿಸಿ.
ನಿಮ್ಮ ಬಳಸಿದ ಟೂ ವೀಲರ್ ಲೋನ್‌ನ ವೇಗದ ಪ್ರಕ್ರಿಯೆಗಾಗಿ ತೊಂದರೆ ರಹಿತ, ಕನಿಷ್ಠ ಡಾಕ್ಯುಮೆಂಟೇಶನ್ ಪಡೆಯಿರಿ.
| ಶುಲ್ಕಗಳ ನಿಗದಿ | ಶುಲ್ಕಗಳು (ಜಿಎಸ್‌ಟಿ ಸೇರಿದಂತೆ) |
|---|---|
| ಪ್ರಕ್ರಿಯಾ ಶುಲ್ಕಗಳು | ಗರಿಷ್ಠ 10% ವರೆಗೆ |
| ಪೆನಲ್ ಶುಲ್ಕಗಳು | ಪಾವತಿಸದ ಕಂತುಗಳ ಮೇಲೆ ವರ್ಷಕ್ಕೆ 36% |
| ಫೋರ್‌ಕ್ಲೋಸರ್ ಶುಲ್ಕಗಳು | ಎ) ಉಳಿದ ಸಾಲದ ಅವಧಿ <=12 ತಿಂಗಳು: ಬಾಕಿ ಅಸಲಿನ ಮೇಲೆ 3% ಬಿ) ಉಳಿದ ಸಾಲದ ಅವಧಿ >12 ರಿಂದ <=24 ತಿಂಗಳುಗಳು: ಬಾಕಿ ಅಸಲಿನ ಮೇಲೆ 4% ಸಿ) ಉಳಿದ ಸಾಲದ ಅವಧಿ > 24 ತಿಂಗಳು: ಬಾಕಿ ಅಸಲಿನ ಮೇಲೆ 5% |
ಇತರೆ ಶುಲ್ಕಗಳು |
| ಚೆಕ್ ಬೌನ್ಸ್ ಶುಲ್ಕಗಳು | ಗರಿಷ್ಠ ₹ 750 |
| ನಕಲಿ ಎನ್‌ಡಿಸಿ/ಎನ್ಒಸಿ ಶುಲ್ಕಗಳು | Rs.500 |
ಶುಲ್ಕಗಳ ಸಂಪೂರ್ಣ ಪಟ್ಟಿಗಾಗಿ, ದಯವಿಟ್ಟು ಇಲ್ಲಿ ಕ್ಲಿಕ್ ಮಾಡಿ
ಬಳಸಿದ ಟೂ ವೀಲರ್ ಲೋನ್ ಪಡೆಯಲು ಅಗತ್ಯವಿರುವ ಡಾಕ್ಯುಮೆಂಟ್‌ಗಳ ಬಗ್ಗೆ ಯೋಚಿಸುತ್ತಿದ್ದೀರಾ? ನಿಮ್ಮ ಉದ್ಯೋಗದ ಪ್ರಕಾರದ ಆಧಾರದ ಮೇಲೆ ಅರ್ಹತಾ ಮಾನದಂಡಗಳನ್ನು ಪರಿಶೀಲಿಸಿ ಮತ್ತು ಸುಲಭ ಡಾಕ್ಯುಮೆಂಟೇಶನ್ ಅನುಭವಿಸಿ. ಸಾಲಕ್ಕೆ ಅಪ್ಲೈ ಮಾಡುವ ಮೊದಲು ನೀವು ಈ ಕೆಳಗೆ ನಮೂದಿಸಿದ ಅರ್ಹತಾ ಮಾನದಂಡಗಳನ್ನು ಪೂರೈಸಬೇಕು.
ನಮ್ಮ ಬಳಸಿದ ಟೂ ವೀಲರ್ ಲೋನ್‌ಗೆ ಅಪ್ಲೈ ಮಾಡಲು ನೀವು ಒದಗಿಸಬೇಕಾದ ಡಾಕ್ಯುಮೆಂಟ್‌ಗಳ ಪಟ್ಟಿ ಇಲ್ಲಿದೆ
ಬಳಸಿದ ಟೂ ವೀಲರ್ ಲೋನ್ ನಿಮಗೆ ಪೂರ್ವ-ಮಾಲೀಕತ್ವದ ಮೋಟಾರ್‌ಸೈಕಲ್ ಅಥವಾ ಸ್ಕೂಟರ್ ಖರೀದಿಸಲು ಸಹಾಯ ಮಾಡುತ್ತದೆ, ಇದು ನಿಗದಿತ ಅವಧಿಯವರೆಗೆ ವಾಹನದ ವೆಚ್ಚವನ್ನು ವಿಭಾಗಿಸುತ್ತದೆ. ಇದರಿಂದ ನೀವು ಸುಲಭವಾಗಿ ನಿಮ್ಮ ಹಣಕಾಸನ್ನು ನಿರ್ವಹಿಸುವ ಜೊತೆಗೆ ಟೂ ವೀಲರ್ ಹೊಂದುವ ಪ್ರಯೋಜನಗಳನ್ನೂ ಆನಂದಿಸಬಹುದು.
ಸಾಮಾನ್ಯವಾಗಿ ಎಲ್ಲಾ ದಾಖಲೆಗಳನ್ನು ಸಲ್ಲಿಸಿದ ಒಂದು ದಿನದೊಳಗೆ ಅನುಮೋದನೆ ಸಿಗುತ್ತದೆ.
ನಿಮ್ಮ ಹಣಕಾಸಿನ ಪರಿಸ್ಥಿತಿಗೆ ಹೊಂದುವಂತೆ 6 ರಿಂದ 60 ತಿಂಗಳವರೆಗಿನ ಫ್ಲೆಕ್ಸಿಬಲ್ ಕಾಲಾವಧಿ ಆಯ್ಕೆ ಲಭ್ಯವಿದೆ.
ಸಾಮಾನ್ಯವಾಗಿ, ಪ್ರಸ್ತುತ ಸಾಲದ ಅವಧಿಯನ್ನು ಒಳಗೊಂಡಂತೆ ಹತ್ತು ವರ್ಷಗಳವರೆಗಿನ ವಾಹನಗಳಿಗೆ ಬಳಸಿದ ಟೂ ವೀಲರ್ ಲೋನ್‌ಗಳ ಮೂಲಕ ಹಣಕಾಸು ಒದಗಿಸುತ್ತೇವೆ.
ಟಿವಿಎಸ್ ಕ್ರೆಡಿಟ್‌ನಲ್ಲಿ, ಸ್ವ ಉದ್ಯೋಗಿ ಅಥವಾ ಸಂಬಳ ಪಡೆಯುವ ವ್ಯಕ್ತಿಗಳು ಟೂ ವೀಲರ್ ಲೋನ್‌ಗೆ ಅಪ್ಲೈ ಮಾಡಲು ಅರ್ಹರಾಗಿರುತ್ತಾರೆ. ಬಳಸಿದ ಟೂ ವೀಲರ್ ಲೋನ್‌ಗೆ ಅರ್ಹತಾ ಮಾನದಂಡಗಳನ್ನು ಪರಿಶೀಲಿಸಿ.
ಬಳಸಿದ ಟೂ ವೀಲರ್ ಲೋನ್ ಪಡೆಯಲು ಅಗತ್ಯವಿರುವ ಡಾಕ್ಯುಮೆಂಟ್‌ಗಳನ್ನು ಪರಿಶೀಲಿಸಲು ನೀವು ಇಲ್ಲಿ ಕ್ಲಿಕ್ ಮಾಡಬಹುದು.
ಇತ್ತೀಚಿನ ಅಪ್ಡೇಟ್‌ಗಳು ಮತ್ತು ಆಫರ್‌ಗಳಿಗಾಗಿ ಸೈನ್ ಅಪ್ ಮಾಡಿ