ನಿಮ್ಮ ಕನಸಿನ ಬೈಕನ್ನು ಪಡೆಯುವುದು ದೊಡ್ಡ ಹಂತವಾಗಿದೆ! ಇದು ನಿಜವಾಗಿಯೂ ನಿಮ್ಮ ಜೀವನಶೈಲಿಯನ್ನು ಅಪ್ಗ್ರೇಡ್ ಮಾಡಬಹುದು. ಆದರೆ ಕೆಲವೊಮ್ಮೆ, ಅದಕ್ಕಾಗಿ ಒಂದೇ ಬಾರಿಗೆ ಪಾವತಿಸುವುದು ಸಾಧ್ಯವಾಗದಿರಬಹುದು. ಅದೃಷ್ಟವಶಾತ್, ಇಎಂಐನಲ್ಲಿ ಬೈಕ್ ಖರೀದಿಸುವುದು (ಸಮನಾದ ಮಾಸಿಕ ಕಂತುಗಳು) ಖರೀದಿಯನ್ನು ಕೈಗೆಟಕುವ ಮತ್ತು ಒತ್ತಡ-ರಹಿತವಾಗಿಸಲು ಉತ್ತಮ ಮಾರ್ಗವಾಗಿದೆ.
ಈ ಬ್ಲಾಗ್ನಲ್ಲಿ, ಇಎಂಐನಲ್ಲಿ ಬೈಕ್ ಖರೀದಿಸುವ ಪ್ರಕ್ರಿಯೆಯ ಬಗ್ಗೆ ನಾವು ನಿಮಗೆ ತಿಳಿಸುತ್ತೇವೆ. ಉತ್ತಮ ಡೀಲ್ಗಳನ್ನು ಪಡೆಯಲು ನೀವು ಹಣಕಾಸಿನ ಅಂಶಗಳು, ಅತ್ಯುತ್ತಮ ಅಭ್ಯಾಸಗಳು ಮತ್ತು ಸಲಹೆಗಳನ್ನು ಅರ್ಥಮಾಡಿಕೊಳ್ಳುತ್ತೀರಿ.
ಇಎಂಐ ನಲ್ಲಿ ಬೈಕ್ ಪಡೆಯುವುದು ಎಂದರೇನು ಮತ್ತು ಅದು ಹೇಗೆ ಕೆಲಸ ಮಾಡುತ್ತದೆ?
ಇಎಂಐ ಎಂದರೆ ಸಮನಾದ ಮಾಸಿಕ ಕಂತುಗಳು. ಇವುಗಳು ನಿಮ್ಮ ಬೈಕ್ ಸಾಲವನ್ನು ಮರುಪಾವತಿಸಲು ನಿಗದಿತ ಅವಧಿಯಲ್ಲಿ ಸಾಲದಾತರಿಗೆ ನೀವು ಮಾಡುವ ನಿಗದಿತ ಮಾಸಿಕ ಪಾವತಿಗಳಾಗಿವೆ. ಪ್ರತಿ ಇಎಂಐ ಪಾವತಿಯು ಬೈಕ್ (ಅಸಲು) ಖರೀದಿಸಲು ನೀವು ತೆಗೆದುಕೊಳ್ಳುವ ಮೂಲ ಸಾಲ ಮೊತ್ತದ ಭಾಗ ಮತ್ತು ಆ ಮೊತ್ತದ ಮೇಲೆ ವಿಧಿಸಲಾಗುವ ಬಡ್ಡಿಯ ಭಾಗವನ್ನು ಒಳಗೊಂಡಿದೆ. ನೀವು ಕಾಲಕಾಲಕ್ಕೆ ಬೈಕ್ ಸಾಲವನ್ನು ಮರುಪಾವತಿಸುವಾಗ, ಅಸಲಿಗೆ ಹೋಗುವ ನಿಮ್ಮ ಇಎಂಐ ನ ಭಾಗವು ಹೆಚ್ಚಾಗುತ್ತದೆ.
ಈ ರಚನೆಯು ಉತ್ತಮವಾಗಿ ಸಂಘಟಿತ ಮತ್ತು ದಕ್ಷ ರೀತಿಯಲ್ಲಿ ಟೂ ವೀಲರ್ ಸಾಲ ನಂತಹ ಯಾವುದೇ ರೀತಿಯ ಸಾಲವನ್ನು ಪಾವತಿಸಲು ನಿಮಗೆ ಸಹಾಯ ಮಾಡುತ್ತದೆ.
ಇಎಂಐನಲ್ಲಿ ಬೈಕ್ ಖರೀದಿಸುವ ಹಂತಗಳು
ಟಿವಿಎಸ್ ಕ್ರೆಡಿಟ್ನಿಂದ ಟೂ ವೀಲರ್ ಲೋನ್ನೊಂದಿಗೆ ನೀವು ನಿಮ್ಮ ಬೈಕನ್ನು ಇಎಂಐನಲ್ಲಿ ಹೇಗೆ ಖರೀದಿಸಬಹುದು ಎಂಬುದು ಇಲ್ಲಿದೆ:
1. ನಿಮ್ಮ ಟೂ ವೀಲರ್ ಸಾಲ ಅರ್ಹತೆಯನ್ನು ಪರಿಶೀಲಿಸಿ:
ಟೂ ವೀಲರ್ ಸಾಲ ಪಡೆಯಲು, ನೀವು ಪೂರೈಸಬೇಕಾದ ಕೆಲವು ಮೂಲಭೂತ ಮಾನದಂಡಗಳು ಇಲ್ಲಿವೆ:
- ರಾಷ್ಟ್ರೀಯತೆ: ನೀವು ಭಾರತೀಯ ನಾಗರಿಕರಾಗಿರಬೇಕು
- ವಯಸ್ಸು: ನೀವು 18 ರಿಂದ 65 ವರ್ಷಗಳ ನಡುವಿನ ವಯಸ್ಸಿನವರಾಗಿರಬೇಕು. ನೀವು 21 ರ ಒಳಗಿನವರಾಗಿದ್ದರೆ, ಆಗ ನೀವು ಖಾತರಿದಾರರೊಂದಿಗೆ ಸಾಲಕ್ಕೆ ಅಪ್ಲೈ ಮಾಡಬಹುದು (ನಿಮಗೆ ಸಾಧ್ಯವಾಗದಿದ್ದರೆ ಪಾವತಿಸಲು ಭರವಸೆ ನೀಡುವ ಯಾರಾದರೂ)
- ಉದ್ಯೋಗದ ಸ್ಥಿತಿ: ನೀವು ಪ್ರಸ್ತುತ ಉದ್ಯೋಗಿಯಾಗಿರಬೇಕು
- ಉದ್ಯೋಗದ ಸ್ಥಿರತೆ: ನೀವು ಕನಿಷ್ಠ ಒಂದು ವರ್ಷದಿಂದ ಸ್ಥಿರವಾಗಿ ಕೆಲಸ ಮಾಡುತ್ತಿರಬೇಕು
2. ಟೂ ವೀಲರ್ ಸಾಲ ಇಎಂಐ ಅಂದಾಜು ಮಾಡಿ:
ನಿಮ್ಮ ಇಎಂಐ ಮತ್ತು ಡೌನ್ ಪೇಮೆಂಟ್ನ ಉತ್ತಮ ಅಂದಾಜು ಪಡೆಯಲು, ನಿಮಗೆ ಅಗತ್ಯವಿರುವ ಸಾಲ ಮೊತ್ತ, ಮರುಪಾವತಿಸಲು ನೀವು ಎಷ್ಟು ಸಮಯ ತೆಗೆದುಕೊಳ್ಳಲು ಬಯಸುತ್ತೀರಿ (ಕಾಲಾವಧಿ), ಬಡ್ಡಿ ದರ, ಬೈಕ್ ಮಾಡೆಲ್/ವೇರಿಯಂಟ್ ಮುಂತಾದ ಕೆಲವು ವಿವರಗಳನ್ನು ಭರ್ತಿ ಮಾಡಿ. ಇದಕ್ಕಾಗಿ ನೀವು ನಮ್ಮ ಟೂ ವೀಲರ್ ಸಾಲ ಇಎಂಐ ಕ್ಯಾಲ್ಕುಲೇಟರ್ ಬಳಸಬಹುದು.
3. ಟೂ ವೀಲರ್ ಸಾಲಕ್ಕೆ ಅಪ್ಲೈ ಮಾಡಿ:
ನೀವು ಕೇವಲ ಮೂರು ಸುಲಭ ಹಂತಗಳಲ್ಲಿ ನಮ್ಮ ಟೂ ವೀಲರ್ ಲೋನ್ಗೆ ಆನ್ಲೈನ್ನಲ್ಲಿ ಅಪ್ಲೈ ಮಾಡಬಹುದು:
ಹಂತ 1: ನಿಮ್ಮ ಬೈಕನ್ನು ಆಯ್ಕೆಮಾಡಿ: ನೀವು ಸಾಲದೊಂದಿಗೆ ಖರೀದಿಸಲು ಬಯಸುವ ನಿರ್ದಿಷ್ಟ ಟೂ ವೀಲರ್ ಮಾಡೆಲ್ ಆಯ್ಕೆಮಾಡಿ.
ಹಂತ 2: ನಿಮ್ಮ ವಿವರಗಳನ್ನು ನಮೂದಿಸಿ: ಮೊಬೈಲ್ ಪರಿಶೀಲನೆ, ವೈಯಕ್ತಿಕ ಮಾಹಿತಿ ಮತ್ತು ಉದ್ಯೋಗ ವಿವರಗಳನ್ನು ಒಳಗೊಂಡಂತೆ ಅಗತ್ಯ ವಿವರಗಳನ್ನು ಒದಗಿಸಿ.
ಹಂತ 3: : ತ್ವರಿತ ಅನುಮೋದನೆ : ಕೇವಲ 2 ನಿಮಿಷಗಳಲ್ಲಿ ನಿಮ್ಮ ಬೈಕ್ ಸಾಲಕ್ಕೆ ಅನುಮೋದನೆ ಪಡೆಯಿರಿ*!
ಇಎಂಐ ನಲ್ಲಿ ಬೈಕ್ ಖರೀದಿಸುವ ಪ್ರಯೋಜನಗಳು
ಇಎಂಐ ಬೈಕ್ ಲೋನ್ನೊಂದಿಗೆ ಬೈಕ್ ಪಡೆಯುವುದು ಅನೇಕ ಪ್ರಯೋಜನಗಳನ್ನು ಹೊಂದಿದೆ, ಅವುಗಳೆಂದರೆ:
- ಗರಿಷ್ಠ ಫಂಡಿಂಗ್: ನೀವು ಬೈಕಿನ ಆನ್-ರೋಡ್ ಬೆಲೆಯ 95%* ವರೆಗೆ ಸಾಲ ಪಡೆಯಬಹುದು
- ಕೈಗೆಟಕುವ ಬಡ್ಡಿ ದರಗಳು: ನೀವು ಸಾಲ ಮರುಪಾವತಿಸಲು ಎಷ್ಟು ಸಮಯದವರೆಗೆ ಆಯ್ಕೆ ಮಾಡುತ್ತೀರಿ ಎಂಬುದರ ಆಧಾರದ ಮೇಲೆ ಆಕರ್ಷಕ ಬಡ್ಡಿ ದರಗಳನ್ನು ಆನಂದಿಸಿ
- ಸುಲಭ ಡಾಕ್ಯುಮೆಂಟೇಶನ್: ಆನ್ಲೈನ್ ಡಾಕ್ಯುಮೆಂಟ್ ಪ್ರಕ್ರಿಯೆಯು ತೊಂದರೆ ರಹಿತವಾಗಿದೆ ಮತ್ತು ಪ್ರಕ್ರಿಯೆಯು ತ್ವರಿತವಾಗಿದೆ
- ತ್ವರಿತ ಅನುಮೋದನೆಗಳು: ಆನ್ಲೈನ್ನಲ್ಲಿ ಅಪ್ಲೈ ಮಾಡಿ ಮತ್ತು ಕೇವಲ 2 ನಿಮಿಷಗಳಲ್ಲಿ ನಿಮ್ಮ ಟೂ ವೀಲರ್ ಲೋನ್ಗೆ ಅನುಮೋದನೆ ಪಡೆಯಿರಿ
- ಯಾವುದೇ ಗುಪ್ತ ಶುಲ್ಕಗಳಿಲ್ಲ: ಸ್ಪಷ್ಟ ಬೆಲೆ ಮತ್ತು ಶೂನ್ಯ ಗುಪ್ತ ಶುಲ್ಕಗಳೊಂದಿಗೆ ಕೋಟ್ಗಳನ್ನು ಪಡೆಯಿರಿ
- ಫ್ಲೆಕ್ಸಿಬಲ್ ಮರುಪಾವತಿ ಅವಧಿ: 12 ರಿಂದ 60 ತಿಂಗಳ ಅವಧಿಯಲ್ಲಿ ನಿಮ್ಮ ಬೈಕ್ ಲೋನ್ ಅನ್ನು ಮರುಪಾವತಿಸಲು ನೀವು ಆಯ್ಕೆ ಮಾಡಬಹುದು
ಇಎಂಐ ನಲ್ಲಿ ನಿಮ್ಮ ಬೈಕ್ಗೆ ಅತ್ಯುತ್ತಮ ಬೆಲೆ ಪಡೆಯಲು ಸಲಹೆಗಳು
ನಿಮ್ಮ ಬೈಕ್ ಖರೀದಿಗೆ ಉತ್ತಮ ಡೀಲ್ಗಳನ್ನು ಸಮಾಲೋಚಿಸುವುದು ಹೇಗೆ ಎಂಬುದು ಇಲ್ಲಿದೆ:
- ಸೀಸನಲ್ ಆಫರ್ಗಳನ್ನು ನೋಡಿ: ವರ್ಷದ ಕೆಲವು ಸಮಯದಲ್ಲಿ ಬೈಕ್ ಡೀಲರ್ಗಳು ಮತ್ತು ಉತ್ಪಾದಕರಿಂದ ವಿಶೇಷ ಡೀಲ್ಗಳನ್ನು ಗಮನಿಸಿ.
- ರಿಯಾಯಿತಿಗಳು ಮತ್ತು ಉಚಿತ ಕೊಡುಗೆಗಳನ್ನು ಸಮಾಲೋಚಿಸಿ: ಬೆಲೆಯ ಮೇಲೆ ರಿಯಾಯಿತಿಗಳನ್ನು ಪಡೆಯಲು ಮತ್ತು ಹೆಲ್ಮೆಟ್ಗಳು, ಇನ್ಶೂರೆನ್ಸ್ ಮುಂತಾದ ಹೆಚ್ಚುವರಿ ಪ್ರಯೋಜನಗಳನ್ನು ಕೇಳಲು ಕಠಿಣ ಚೌಕಾಸಿ ನಡೆಸಿ.
- ಕ್ಯಾಶ್ಬ್ಯಾಕ್ ಬಳಸಿ: ನೀವು ಗಳಿಸಿದ ಯಾವುದೇ ಲಾಯಲ್ಟಿ ಪಾಯಿಂಟ್ಗಳು, ನಿಮ್ಮ ಹಳೆಯ ವಾಹನಕ್ಕೆ ಎಕ್ಸ್ಚೇಂಜ್ ಆಫರ್ಗಳು ಅಥವಾ ಕ್ಯಾಶ್ಬ್ಯಾಕ್ ಡೀಲ್ಗಳ ಪ್ರಯೋಜನ ಪಡೆಯಿರಿ.
ಇಎಂಐ ನಲ್ಲಿ ನಿಮ್ಮ ಬೈಕನ್ನು ಅಂತಿಮಗೊಳಿಸುವ ಮೊದಲು ಪರಿಗಣಿಸಬೇಕಾದ ವಿಷಯಗಳು
ಇಎಂಐ ನಲ್ಲಿ ಬೈಕ್ ಖರೀದಿಸುವ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳುವ ಮೊದಲು, ಸುಗಮ ಖರೀದಿ ಅನುಭವಕ್ಕಾಗಿ ಈ ಕೆಳಗಿನ ಅಂಶಗಳ ಬಗ್ಗೆ ಸಂಶೋಧನೆ ಮಾಡಿ:
ಸರಿಯಾದ ಬೈಕ್ ಮಾಡೆಲ್ ಆಯ್ಕೆಮಾಡಿ: ನಿಮ್ಮ ಅಗತ್ಯಗಳು ಮತ್ತು ಬಜೆಟ್ಗೆ ಸೂಕ್ತವಾದ ಬೈಕನ್ನು ಆಯ್ಕೆಮಾಡಿ.
ಒಟ್ಟು ವೆಚ್ಚವನ್ನು ಲೆಕ್ಕ ಹಾಕಿ: ನೀವು ಟೂ ವೀಲರ್ ಸಾಲ ತೆಗೆದುಕೊಳ್ಳುವಾಗ ನೀವು ಪಾವತಿಸಬೇಕಾದ ಬಡ್ಡಿಯಂತಹ ಅಂಶಗಳನ್ನು ಒಳಗೊಂಡಂತೆ ಬೈಕಿನ ಒಟ್ಟು ವೆಚ್ಚವನ್ನು ಮೌಲ್ಯಮಾಪನ ಮಾಡಿ.
ವೈಯಕ್ತಿಕ ನಗದು ಹರಿವಿನ ಮೇಲೆ ಪರಿಣಾಮ: ನಿಮ್ಮ ಇತರ ವೆಚ್ಚಗಳು ಮತ್ತು ಹಣಕಾಸಿನ ಜವಾಬ್ದಾರಿಗಳನ್ನು ಪರಿಗಣಿಸಿ, ನಿಮ್ಮ ಮಾಸಿಕ ಬಜೆಟ್ಗೆ ಆರಾಮದಾಯಕವಾಗಿ ಸರಿಹೊಂದುವ ಇಎಂಐ ಆಯ್ಕೆಯನ್ನು ಆರಿಸಿ.
ಎಫ್ಎಕ್ಯೂ ಗಳು –
1. ಇಎಂಐ ನಲ್ಲಿ ಬೈಕ್ ಖರೀದಿಸುವುದು ಹೇಗೆ?
ಇಎಂಐ ನಲ್ಲಿ ಬೈಕ್ ಖರೀದಿಸಲು, ನೀವು ಮೊದಲು ನಿಮ್ಮ ಅಪೇಕ್ಷಿತ ಬೈಕನ್ನು ಆಯ್ಕೆ ಮಾಡಬೇಕು ಮತ್ತು ನಂತರ 3 ಸರಳ ಹಂತಗಳಲ್ಲಿ ಅದನ್ನು ಖರೀದಿಸಲು ಮುಂದುವರಿಯಬೇಕು:
ಹಂತ 1: ಅರ್ಹತೆಯನ್ನು ಪರಿಶೀಲಿಸಿ: ರಾಷ್ಟ್ರೀಯತೆ, ವಯಸ್ಸಿನ ಮಿತಿ, ಆದಾಯ ಸ್ಥಿರತೆ, ಉದ್ಯೋಗ ಸ್ಥಿತಿ ಮುಂತಾದ ಅಗತ್ಯವಿರುವ ಮಾನದಂಡಗಳನ್ನು ನೀವು ಪೂರೈಸುತ್ತೀರಾ ಎಂದು ಪರಿಶೀಲಿಸಿ. ಯಾವುದೇ ಅಗತ್ಯವಿರುವ ಡಾಕ್ಯುಮೆಂಟೇಶನ್ ಅನ್ನು ಕ್ರಮವಾಗಿ ಇರಿಸಿಕೊಳ್ಳಿ.
ಹಂತ 2: ಇಎಂಐ ಲೆಕ್ಕ ಹಾಕಿ: ಸಾಲ ಮೊತ್ತ ಮತ್ತು ಕಾಲಾವಧಿ, ಬಡ್ಡಿ ದರ ಇತ್ಯಾದಿಗಳ ಆಧಾರದ ಮೇಲೆ ನಿಮ್ಮ ಇಎಂಐ ಅನ್ನು ಲೆಕ್ಕ ಹಾಕಿ.
ಹಂತ 3: ಸಾಲಕ್ಕೆ ಅಪ್ಲೈ ಮಾಡಿ: ಸರಳ ಆನ್ಲೈನ್ ಫಾರ್ಮ್ ಭರ್ತಿ ಮಾಡಿ ಮತ್ತು ಕೇವಲ 2 ನಿಮಿಷಗಳಲ್ಲಿ ಸಾಲ ಅನುಮೋದನೆಗಳನ್ನು ಪಡೆಯಿರಿ
2. ನಾನು ಇಎಂಐ ನಲ್ಲಿ ಬಳಸಿದ ಬೈಕನ್ನು ಖರೀದಿಸಬಹುದೇ?
ಹೌದು, ಟಿವಿಎಸ್ ಕ್ರೆಡಿಟ್ನಂತಹ ಎನ್ಬಿಎಫ್ಸಿಗಳು ಬಳಸಿದ ಬೈಕ್ಗಳನ್ನು ಖರೀದಿಸಲು ಇಎಂಐ ಆಯ್ಕೆಗಳೊಂದಿಗೆ ಬಳಸಿದ ಟೂ ವೀಲರ್ ಲೋನ್ಗಳನ್ನು ಒದಗಿಸುತ್ತವೆ. ಆದಾಗ್ಯೂ ಅಂತಹ ನಿಬಂಧನೆಗಳ ಲಭ್ಯತೆಯು ಹೊಸ ಬೈಕ್ಗಳಿಂದ ಭಿನ್ನವಾಗಿರಬಹುದು. ಇಎಂಐ ನಲ್ಲಿ ಬಳಸಿದ ಬೈಕ್ ಖರೀದಿಸುವ ನಿರ್ದಿಷ್ಟತೆಗಳಿಗೆ ಸಂಬಂಧಿಸಿದಂತೆ ಎನ್ಬಿಎಫ್ಸಿ ಯೊಂದಿಗೆ ವಿಚಾರಿಸಲು ನಾವು ಶಿಫಾರಸು ಮಾಡುತ್ತೇವೆ
3. ಟೂ ವೀಲರ್ ಖರೀದಿಸುವಾಗ ಏನನ್ನು ನೋಡಬೇಕು?
ಟೂ ವೀಲರ್ ಖರೀದಿಸಲು ಯೋಚಿಸುವಾಗ, ನಿಮ್ಮ ಭೌತಿಕ ಅವಶ್ಯಕತೆಗಳಿಗೆ ಸರಿಹೊಂದುವಂತೆ ನಿಮ್ಮ ಆದ್ಯತೆಯ ಬ್ರ್ಯಾಂಡ್, ಎತ್ತರ ಮತ್ತು ಮಾಡೆಲ್ ತೂಕ, ವಾಹನದ ಮೈಲೇಜ್ ಮತ್ತು ವಾಹನದ ಆನ್-ರೋಡ್ ರಿವ್ಯೂಗಳಂತಹ ನಿಮ್ಮ ನಿರ್ದಿಷ್ಟ ಅಗತ್ಯಗಳನ್ನು ಗಮನದಲ್ಲಿಟ್ಟುಕೊಳ್ಳಿ. ಈ ಮಾನದಂಡಗಳನ್ನು ಹೊರತುಪಡಿಸಿ, ಬೈಕ್ ಮಾಡೆಲ್ ನಿಮ್ಮ ಹಣಕಾಸಿನ ಮಾನದಂಡಗಳಿಗೆ ಸರಿಹೊಂದುತ್ತದೆಯೇ ಅಂದರೆ, ನೀವು ಇಎಂಐ ಸೇರಿದಂತೆ ವೆಚ್ಚವನ್ನು ಆರಾಮದಾಯಕವಾಗಿ ಕವರ್ ಮಾಡಬಹುದೇ ಎಂದು ಕೂಡ ಪರಿಶೀಲಿಸಿ. ಸಾಧ್ಯವಾದಷ್ಟು ಉತ್ತಮ ಡೀಲ್ ಮತ್ತು ಸಾಲದ ನಿಯಮಗಳನ್ನು ಪಡೆಯಲು ಬೈಕ್ ಡೀಲರ್ಶಿಪ್ ಮತ್ತು ನಿಮ್ಮ ಎನ್ಬಿಎಫ್ಸಿಯೊಂದಿಗೆ ಸಮಾಲೋಚನೆ ಮಾಡಿ.
ಹಕ್ಕು ನಿರಾಕರಣೆ: ನಮ್ಮ ವೆಬ್ಸೈಟ್ ಮತ್ತು ಸಹಯೋಗಿ ವೇದಿಕೆಗಳ ಮೂಲಕ ನಾವು ಒದಗಿಸುವ ಮಾಹಿತಿ, ಉತ್ಪನ್ನಗಳು ಮತ್ತು ಸೇವೆಗಳು ನಿಖರವಾಗಿವೆ ಎಂಬುದನ್ನು ನಾವು ಖಚಿತಪಡಿಸುತ್ತಿರುವಾಗ, ವಿಷಯದಲ್ಲಿ ಅನಿರೀಕ್ಷಿತ ತಪ್ಪುಗಳು ಮತ್ತು/ಅಥವಾ ಟೈಪೋಗ್ರಾಫಿಕಲ್ ದೋಷಗಳು ಇರಬಹುದು. ಈ ಸೈಟ್ ಮತ್ತು ಸಂಬಂಧಿತ ವೆಬ್ಸೈಟ್ಗಳ ಮಾಹಿತಿಯು ಸಾಮಾನ್ಯ ಮಾಹಿತಿ ಉದ್ದೇಶಕ್ಕಾಗಿವೆ ಮತ್ತು ಯಾವುದೇ ಅಸ್ಥಿರತೆಯ ಸಂದರ್ಭದಲ್ಲಿ,ಪ್ರಾಡಕ್ಟ್/ಸೇವಾ ಡಾಕ್ಯುಮೆಂಟ್ನಲ್ಲಿ ನಮೂದಿಸಿದ ವಿವರಗಳು ಆದ್ಯತೆಯನ್ನು ತೆಗೆದುಕೊಳ್ಳುತ್ತವೆ. ಪ್ರಾಡಕ್ಟ್ ಅಥವಾ ಸೇವೆಯನ್ನು ಪಡೆಯುವ ಮೊದಲು ಸಮರ್ಪಕ ನಿರ್ಧಾರವನ್ನು ತೆಗೆದುಕೊಳ್ಳಲು ವೀಕ್ಷಕರು ಮತ್ತು ಸಬ್ಸ್ಕ್ರೈಬರ್ಗಳನ್ನು ವೃತ್ತಿಪರ ಸಲಹೆಯನ್ನು ಪಡೆಯಲು ಮತ್ತು ಪ್ರಾಡಕ್ಟ್/ಸೇವಾ ಡಾಕ್ಯುಮೆಂಟ್ಗಳನ್ನು ನೋಡುವಂತೆ ಸಲಹೆ ನೀಡಲಾಗುತ್ತದೆ.
*ಅನ್ವಯವಾಗುವಲ್ಲಿ - ನಿಯಮ ಮತ್ತು ಷರತ್ತುಗಳು ಅನ್ವಯವಾಗುತ್ತವೆ
ಕೆಟಗರಿಗಳು
ಜನಪ್ರಿಯ ಬ್ಲಾಗ್ಗಳು
ಜನಪ್ರಿಯ ಬ್ಲಾಗ್ಗಳು
ನಿಮ್ಮ ಎಲ್ಲಾ ಹಣಕಾಸಿನ ಅಗತ್ಯಗಳಿಗೆ ತೊಂದರೆ ರಹಿತ ಸಾಲ ಪಡೆಯಿರಿ
ನಿಮ್ಮ ಟೂ ವೀಲರ್ ಲೋನ್ ಇಎಂಐ ಲೆಕ್ಕ ಹಾಕಿ
ಟೂ ವೀಲರ್ ಲೋನ್ಗಳು
ಫೀಚರ್ಗಳು ಹಾಗೂ ಪ್ರಯೋಜನಗಳು
ಟೂ ವೀಲರ್ ಲೋನ್ಗಳು
ಅರ್ಹತೆ ಮತ್ತು ಡಾಕ್ಯುಮೆಂಟ್ಗಳು









